ಶಿವಮೊಗ್ಗ: ಅಕ್ಟೋಬರ್ ಮಾಹೆಯನ್ನು ಜಾಗತಿಕ ಮಟ್ಟದಲ್ಲಿ ಸೈಬರ್ ಭದ್ರತೆಯ ಮಾಸವನ್ನಾಗಿ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಶಿವಮೊಗ್ಗ ಜಿಲ್ಲಾ ಶಾಖೆ ಹಾಗೂ ಸೈಸೆಕ್(Cyseck) ಸಹಯೋಗದಲ್ಲಿ ಸೈಬರ್ ಅಪರಾಧಗಳಿಂದ ಹೆಚ್ಚು ಸುರಕ್ಷಿತರಾಗುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತ ಮೂಡಿಸಲು ಖ್ಯಾತ ಹಾಸ್ಯ ಕಲಾವಿದರಿಂದ “ಸೈಬರ್ ಹಾಸ್ಯ ಸಂಜೆ” ಕಾರ್ಯಕ್ರಮ ಆಯೋಜಿಸಲಾಗಿದೆ.
ಅ. 07 ರ ಶನಿವಾರ ಸಂಜೆ 5 ಗಂಟೆಗೆ ಸರ್ಕಾರಿ ನೌಕರರ ವಿಕಾಸ ಕೇಂದ್ರ, ಚೌಡಮ್ಮ ದೇವಸ್ಥಾನ ಪಕ್ಕ, 1ನೇ ತಿರುವು, ಬಸವನಗುಡಿ, ಶಿವಮೊಗ್ಗ ಇಲ್ಲಿ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಖ್ಯಾತ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್, ಸುಧಾ ಬರಗೂರು, ವೈ.ವಿ. ಗುಂಡುರಾವ್, ಎಂ.ಎಸ್. ನರಸಿಂಹಮೂರ್ತಿ, ಹೆಚ್. ದುಂಡಿರಾಜ್, ಬಸವರಾಜ ಮಹಾಮನಿ ಅವರು ಭಾಗವಹಿಸಲಿದ್ದಾರೆ. ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಉಪಸ್ಥಿತರಿರುತ್ತಾರೆ.
ಜಿಲ್ಲೆಯ ಅಧಿಕಾರಿಗಳು, ಸರ್ಕಾರಿ ನೌಕರರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದೆ.