ಗಂಗಾ ನದಿಯು ದೇಶದ ಪ್ರಮುಖ ನದಿಗಳಲ್ಲಿ ಒಂದಾಗಿದ್ದು, ಪಾವಿತ್ರ್ಯದ ದೃಷ್ಟಿಯಿಂದಲೂ ಇದು ಕೋಟ್ಯಂತರ ಜನರ ನಂಬಿಕೆಯ ನದಿಯಾಗಿದೆ. ಅದರಲ್ಲೂ, ಗಂಗಾ ನದಿಯಲ್ಲಿ ಮಿಂದೆದ್ದರೆ ಎಲ್ಲ ಪಾಪಗಳು ಕಳೆಯುತ್ತವೆ ಎಂಬುದು ಸಹ ಹಿಂದೂಗಳ ನಂಬಿಕೆಯಾಗಿದೆ.
ಇಂತಹ ಗಂಗಾ ನದಿಯ ನೀರು ಕಲುಷಿತವಾಗಿದ್ದು, ಸ್ನಾನಕ್ಕೂ ಯೋಗ್ಯವಲ್ಲ ಎಂಬ ಕುರಿತು ಮಾತುಗಳು ಕೇಳಿ ಬಂದ ಬೆನ್ನಲ್ಲೇ ನದಿ ನೀರಿನ ಸ್ವಚ್ಛತೆ ಕುರಿತು ಕೇಂದ್ರ ಸರಕಾರ ಸ್ಪಷ್ಟನೆ ನೀಡಿದ್ದು, ’ಗಂಗಾ ನದಿಯ ನೀರು ಸ್ನಾನಕ್ಕೆ ಯೋಗ್ಯವಾಗಿದೆ,’ ಎಂದು ತಿಳಿಸಿದೆ.
12 ಅಡಿ ಎತ್ತರದ ಗೋಡೆಗಳನ್ನೇರುತ್ತಾರೆ ಸ್ಪೈಡರ್ ಗರ್ಲ್ಸ್..! ಸಖತ್ ಸದ್ದು ಮಾಡುತ್ತಿದೆ ಈ ವಿಡಿಯೋ
ಕೇಂದ್ರ ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವ ವಿಶ್ವೇಶ್ವರ ಟುಡು ಅವರು ಈ ಕುರಿತು ಮಾಹಿತಿ ನೀಡಿದ್ದು, ’ಗಂಗಾ ನದಿಯ ಯಾವುದೇ ಪಾತ್ರಗಳು ಒಂದರಿಂದ ನಾಲ್ಕನೇ ಕೆಟಗರಿಯ ವ್ಯಾಪ್ತಿಯಲ್ಲಿ ಇಲ್ಲ. ಕೇವಲ ಎರಡು ನದಿಪಾತ್ರಗಳು ಕೆಟಗರಿ 5ರ ವ್ಯಾಪ್ತಿಯಲ್ಲಿವೆ. ಕೆಟಗರಿ ಒಂದರ ವ್ಯಾಪ್ತಿಯಲ್ಲಿ ಬಂದರೆ ನದಿ ನೀರು ತುಂಬ ಕಲುಷಿತವಾಗಿದೆ ಎಂದು ಅರ್ಥ. ಕೆಟಗರಿ ಐದರ ವ್ಯಾಪ್ತಿಗೆ ಬಂದರೆ, ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕಲುಷಿತವಾಗಿದೆ ಎಂದು ಅರ್ಥ. ಇವೆಲ್ಲ ಮಾನದಂಡಗಳನ್ನು ನೋಡಿದರೆ ಗಂಗಾ ನದಿ ನೀರು ಸ್ನಾನಕ್ಕೆ ಯೋಗ್ಯವಾಗಿದೆ ಎಂಬುದು ಸಾಬೀತಾಗುತ್ತದೆ’ ಎಂದು ಹೇಳಿದ್ದಾರೆ.
ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಗಂಗಾ ನದಿಯ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ‘ನಮಾಮಿ ಗಂಗೆ ‘ ಎಂಬ ಯೋಜನೆಯನ್ನೇ ರೂಪಿಸಲಾಗಿದೆ. ಗಂಗಾ ನದಿ ಸ್ವಚ್ಛಗೊಳಿಸಲು ಕೇಂದ್ರ ಸರಕಾರವು 30 ಸಾವಿರ ಕೋಟಿ ರೂ. ವೆಚ್ಚವಾಗುತ್ತದೆ ಎಂದು ಅಂದಾಜಿಸಿದ್ದು, ಇದಕ್ಕಾಗಿ ಒಟ್ಟು 364 ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದ್ದು, ಈಗಾಗಲೇ 183 ಯೋಜನೆಗಳು ಪೂರ್ಣಗೊಂಡಿವೆ.