ಹಿಂದೂ ಧರ್ಮದಲ್ಲಿ ಗಂಗಾ ನದಿಯನ್ನು ದೇವಿಗೆ ಹೋಲಿಕೆ ಮಾಡಲಾಗುತ್ತದೆ. ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಿದ್ರೆ ಎಲ್ಲ ಸಮಸ್ಯೆ ಬಗೆಹರಿಯುತ್ತೆ ಎಂದು ನಂಬಲಾಗಿದೆ. ಮೋಕ್ಷ ಪ್ರಾಪ್ತಿಗೆ, ಪಾಪ ಪರಿಹಾರಕ್ಕೆ ಜನರು ಗಂಗಾ ನದಿಯಲ್ಲಿ ಸ್ನಾನ ಮಾಡ್ತಾರೆ. ಪ್ರತಿ ದಿನ ಗಂಗಾ ಸ್ನಾನ ಮಾಡುವುದರಿಂದ ಬಹಳ ಲಾಭವಿದೆ. ದೈಹಿಕ ಹಾಗೂ ಮಾನಸಿಕ ರೋಗ ಕಡಿಮೆಯಾಗುತ್ತದೆ. ಆದ್ರೆ ಪ್ರತಿ ದಿನ ಗಂಗೆ ಸ್ನಾನ ಸಾಧ್ಯವಿಲ್ಲದ ಕಾರಣ ಜನರು ಹಬ್ಬದ ದಿನಗಳಲ್ಲಿ ಗಂಗೆಯಲ್ಲಿ ಮುಳುಗೆದ್ದು ಬರ್ತಾರೆ.
ಗಂಗಾ ಸ್ನಾನ ಮಾಡುವ ಮೊದಲು ಜನರು ಕೆಲ ನಿಯಮಗಳನ್ನು ಪಾಲನೆ ಮಾಡಬೇಕು. ಆಗ ಮಾತ್ರ ಗಂಗೆ ಸ್ನಾನದ ಸಂಪೂರ್ಣ ಫಲಿತಾಂಶ ನಿಮಗೆ ಸಿಗಲು ಸಾಧ್ಯ.
- ಗಂಗೆಯಲ್ಲಿ ಸ್ನಾನ ಮಾಡುವ ಮೊದಲು ಗಂಗಾ ಮಾತೆಯನ್ನು ನಮಸ್ಕರಿಸಿ ನಂತ್ರ ಸ್ನಾನ ಮಾಡಬೇಕು.
- ಸ್ನಾನ ಮಾಡಬೇಕಾದ್ರೆ ಗಂಗೆಯನ್ನು ನೆನಪು ಮಾಡಿಕೊಳ್ಳಬೇಕು. ಹರ್, ಹರ್ ಗಂಗಾ ಎಂದು ಹೇಳಬೇಕು.
- ನೀವು ಮೂರು, ಐದು ಅಥವಾ ಏಳು ಬಾರಿ ಮುಳುಗೇಳಬೇಕಾಗುತ್ತದೆ. ಆಗ ಮಾತ್ರ ಪಾಪ ಪರಿಹಾರವಾಗುತ್ತದೆ.
- ಗಂಗೆಯಲ್ಲಿ ಮಿಂದೇಳಬೇಕೇ ವಿನಃ ಸೋಪ್ ಹಾಕಿ ಸ್ನಾನ ಮಾಡಬಾರದು.
- ಮಲ – ಮೂತ್ರ ವಿಸರ್ಜನೆ ಮಾಡಬಾರದು.
- ಗಂಗೆ ಸ್ನಾನ ಮಾಡಿದ ನಂತ್ರ ಮೈ ಒರೆಸಿಕೊಳ್ಳಬಾರದು. ಅದು ಹಾಗೆ ಒಣಗಲು ಬಿಡಬೇಕು.