ರಾಂಚಿ: ಅಪ್ರಾಪ್ತೆಯನ್ನು ಅಪಹರಿಸಿ ಚಾಕು ತೋರಿಸಿ ಬೆದರಿಸಿ ಸಾಮೂಹಿ ಅತ್ಯಾಚಾರ ಎಸಗಿದ್ದ ಮೂವರು ಆರೋಪಿಗಳನ್ನು ರಾಂಚಿ ಪೊಲೀಸ್ ವಿಶೇಷ ತಂಡ ಬಂಧಿಸಿದೆ.
ರಾಂಚಿಯ ಚಾನ್ಹೋ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತ 3 ಆರೋಪಿಗಳು ಭಾಗಿಯಾಗಿದ್ದರು. ಜನವರಿ 16 ರಂದು ಬಾಲಕಿಯನ್ನು ಕಾರ್ ನಲ್ಲಿ ಅಪಹರಿಸಿ, ಏಕಾಂತ ಸ್ಥಳಕ್ಕೆ ಕರೆದೊಯ್ದು ಚಾಕು ತೋರಿಸಿ ಅತ್ಯಾಚಾರ ಎಸಗಿದ್ದರು.
ಪ್ರಕರಣ ದಾಖಲಿಸಿಕೊಂಡ ರಾಂಚಿ ಪೊಲೀಸರು ಕಾಮುಕರ ಬಂಧನಕ್ಕೆ ವಿಶೇಷ ತಂಡ ರಚಿಸಿದ್ದರು.