ಬೆಳಗಾವಿ: ಇಬ್ಬರು ಬಾಲಕಿಯರ ಮೇಲೆ ಗ್ಯಾಂಗ್ ರೇಪ್ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದಲ್ಲಿ ನಡೆದಿದೆ.
ಇಬ್ಬರು ಬಾಲಕಿಯರನ್ನು ಗುಡ್ಡಗಾಡು ಪ್ರದೇಶಕ್ಕೆ ಎಕರೆದೊಯ್ದು ಕಾಮುಕರು ಅಟ್ಟಹಾಸ ಮೆರೆದಿದ್ದಾರೆ. ಅಲ್ಲದೇ ಕೃತ್ಯದ ವಿಡಿಯೋ ಇಟ್ಟುಕೊಂಡು ಆರೋಪಿಗಳು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಈ ಬಗ್ಗೆ ಹಾರುಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಬೆಳಗವೈ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಭಿಷೇಕ್, ಆದಿಲ್ ಜಮಾದಾರ್ ಹಾಗೂ ಡ್ರೈವರ್ ಕೌತುಕ್ ಬಡಿಗೇರ ಬಂಧಿತರು.
ಈ ಬಗ್ಗೆ ಬೆಳಗವೈ ಎಸ್ ಪಿ ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದು, ಗ್ಯಾಂಗ್ ರೇಪ್ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿ ಅಭಿಷೇಕ್ ಬಾಲಕಿಗೆ ಇನ್ ಸ್ಟಾಗ್ರಾಂ ಮೂಲಕ ಪರಿಚಯನಾಗಿದ್ದಾನೆ. ಸವದತ್ತಿಗೆ ಹೋಗುತ್ತೇನೆ ಬಾ ಎಂದು ಬಾಲಕಿಯನ್ನು ಪುಸಲಾಯಿಸಿದ್ದಾನೆ. ಆತನ ಮಾತು ನಂಬಿ ಬಾಲಕಿ ತನ್ನ ಸ್ನೇಹಿತೆಯನ್ನು ಕರೆದುಕೊಂಡು ಹಾರುಗೇರಿ ಬಸ್ ನಿಲ್ದಾಣಕ್ಕೆ ಹೋಗಿದ್ದಾಳೆ. ಈ ವೇಳೆ ಆರೋಪಿ ಇಬ್ಬರು ಬಾಲಕಿಯರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಕಾರಿನಲ್ಲಿ ಅಭಿಷೇಕ್ ಜೊತೆ ಇನ್ನಿಬ್ಬರಿದ್ದರು.
ಕಾರನ್ನು ಸವಸುದ್ದಿ ಗ್ರಾಮದ ಗುಡ್ಡಗಾಡು ಪ್ರದೇಶಕ್ಕೆ ಕರೆದೊಯ್ದು ಜ.3ರಂದು ಬಾಲಕಿಯರ ಮೇಲೆ ಮೂವರು ಅತ್ಯಾಚಾರವೆಸಗಿದ್ದಾರೆ. ಕೃತ್ಯದ ವಿಡಿಯೋ ಮಾಡಿಟ್ಟುಕೊಂಡು ಬಳಿಕ ಬ್ಲ್ಯಾಕ್ ಮೇಲ್ ಮಾಡಿ, ಮುಂದಿನ ವಾರ ಗೋವಾಕ್ಕೆ ಬರಬೇಕು. ಇಲ್ಲವಾದರೆ ವಿಡಿಯೋ ಹರಿಬಿಡುವುದಾಗಿ ಬೆದರಿಸಿದ್ದರು. ಮನೆಯಲ್ಲಿ ವಿಷಯ ತಿಳಿಸಿದ ಬಾಲಕಿಯರು. ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.