ರೈಲಿನಲ್ಲಿ ಚಿನ್ನದ ಸರ ಮತ್ತು ಮಂಗಳಸೂತ್ರ ಕದಿಯುತ್ತಿದ್ದ ಮಹಿಳೆಯರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರು 4 ಮಹಿಳೆಯರನ್ನು ಬಂಧಿಸಿದ್ದಾರೆ. ಆರೋಪಿಯಿಂದ ನಾಲ್ಕು ಮಂಗಳಸೂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ನಾಲ್ವರು ಮಹಿಳೆಯರು ರಾಜ್‌ಗಢ್ ಜಿಲ್ಲೆಯ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ರೈಲುಗಳಲ್ಲಿ ಕಳ್ಳತನದ ಘಟನೆಗಳು ನಿರಂತರವಾಗಿ ನಡೆಯುತ್ತಿವೆ ಎಂಬ ದೂರಿನ ಮೇಲೆ ಪೊಲೀಸರು ಕ್ರಮಕೈಗೊಂಡಿದ್ದರು. ಸಿಸಿ ಟಿವಿ ಕ್ಯಾಮೆರಾಗಳ ಮೂಲಕ ನಿಲ್ದಾಣದ ಮೇಲೆ ಕಣ್ಣಿಡಲಾಗಿತ್ತು.
ತನಿಖೆ ವೇಳೆ ನಾಲ್ವರು ಅನುಮಾನಾಸ್ಪದ ಮಹಿಳೆಯರು ಕಾಣಿಸಿಕೊಂಡಿದ್ದರು. ಎಲ್ಲರನ್ನೂ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಯ್ತು. ನಾಲ್ವರು ಮಹಿಳೆಯರಿಂದ ನಾಲ್ಕು ಮಂಗಳಸೂತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಎರಡು ದಿನಗಳ ಹಿಂದೆ ಮಹಿಳಾ ಪ್ರಯಾಣಿಕರೊಬ್ಬರು ತಮ್ಮ ಮಂಗಳಸೂತ್ರ ಕಳ್ಳತನವಾಗಿದೆ ಎಂದು ದೂರು ನೀಡಿದ್ದರು.
ಈ ಹಿಂದೆಯೂ ಮಹಿಳೆಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿತ್ತು. ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.