ಗೌರಿ – ಗಣೇಶ ಹಬ್ಬ ಸಮೀಪಿಸುತ್ತಿದ್ದು, ಇದರ ಸಂಭ್ರಮದ ಆಚರಣೆಗಾಗಿ ಸಾರ್ವಜನಿಕರು ಸಜ್ಜಾಗುತ್ತಿದ್ದಾರೆ. ಸಾರ್ವಜನಿಕ ಗಣೇಶೋತ್ಸವ ಆಚರಣೆಗಾಗಿ ಈಗಾಗಲೇ ತಯಾರಿಗಳು ನಡೆದಿದ್ದು, ಬೆಂಗಳೂರಿನ ಜೆಪಿ ನಗರದ ಶ್ರೀ ಸತ್ಯ ಗಣಪತಿ ಶಿರಡಿ ಸಾಯಿ ಟ್ರಸ್ಟ್ ಈ ಬಾರಿ ವಿಶಿಷ್ಟವಾಗಿ ಆಚರಿಸಲು ಮುಂದಾಗಿದೆ.
ಶ್ರೀ ಸತ್ಯ ಗಣಪತಿ ಶಿರಡಿ ಸಾಯಿ ಟ್ರಸ್ಟ್ ಪ್ರತಿ ವರ್ಷವೂ ಹೊಸತನ ಸೃಷ್ಟಿಸುತ್ತಿದ್ದು, ಈ ಬಾರಿಯ ಗಣೇಶೋತ್ಸವವನ್ನು ನಾಣ್ಯ ಮತ್ತು ನೋಟುಗಳಿಂದ ಅಲಂಕರಿಸುವ ಮೂಲಕ ವೈಭವದಿಂದ ಆಚರಿಸಲು ಸಿದ್ಧತೆ ನಡೆದಿದೆ.
50 ಲಕ್ಷ ರೂ. ಮೌಲ್ಯದ ನಾಣ್ಯಗಳು ಹಾಗೂ ಕೋಟ್ಯಾಂತರ ರೂ ಮೌಲ್ಯದ ನೋಟುಗಳಿಂದ ಗಣೇಶನನ್ನು ಅಲಂಕರಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ 150ಕ್ಕೂ ಅಧಿಕ ಮಂದಿಯ ತಂಡ ಕಾರ್ಯ ನಿರತವಾಗಿದೆ. ಗಣೇಶನ ಅಲಂಕಾರಕ್ಕಾಗಿ 2, 10, 20 ಮೊತ್ತದ ಒಂದೂವರೆ ಲಕ್ಷ ನಾಣ್ಯಗಳು ಹಾಗೂ 5, 10, 20, 100 ಹಾಗೂ 500 ರೂಪಾಯಿ ಮೌಲ್ಯದ ನೋಟುಗಳನ್ನು ಬಳಸಿಕೊಳ್ಳಲಾಗುತ್ತಿದೆ.