ಆದಿಯಲ್ಲಿ ಮೊದಲು ಪೂಜಿಸಲ್ಪಡುವ ಗಣಪತಿಯನ್ನು ವಿಘ್ನ ವಿನಾಶಕ ಎಂದೇ ನಂಬಲಾಗಿದೆ. ಕೆಲಸಗಳನ್ನು ಪೂರ್ಣಗೊಳಿಸಲು ಹಾಗೂ ಯಶಸ್ಸು ಗಳಿಸಲು ಗಣಪತಿ ಆರಾಧನೆ ಮಾಡಲಾಗುತ್ತದೆ. ಗಣೇಶನನ್ನು ಪೂಜಿಸಲು ಅನೇಕ ಮಂತ್ರಗಳು, ಸ್ತೋತ್ರಗಳು, ಭಜನೆಗಳಿವೆ. ಭಯ – ಭಕ್ತಿಯಿಂದ ಗಣೇಶನ ಆರಾಧನೆ ಮಾಡಿದ್ರೆ ಫಲ ಪ್ರಾಪ್ತಿಯಾಗುತ್ತದೆ. ಅನೇಕರಿಗೆ ಸಂತಾನ ಸುಖ ಪ್ರಾಪ್ತಿಯಾಗುವುದಿಲ್ಲ. ಮಕ್ಕಳಿಗಾಗಿ ನಾನಾ ಪ್ರಯತ್ನ ನಡೆಸಿರುತ್ತಾರೆ. ಅಂತವರಿಗೂ ಸಿದ್ಧಿ ವಿನಾಯಕ ಕೃಪೆ ತೋರುತ್ತಾನೆ. ಸಂತಾನ ಕರುಣಿಸ್ತಾನೆ. ಸಂತಾನ ಪ್ರಾಪ್ತಿಗಾಗಿ ಸಂತಾನ ಗಣಪತಿ ಸ್ತೋತ್ರವನ್ನು ಪಠಿಸಬೇಕು.
ಈ ಮಂತ್ರ ಪಠಣ ಮಾಡುವ ಮೊದಲು ಶುದ್ಧತೆ ಮುಖ್ಯ. ಸರಿಯಾದ ಮಾರ್ಗದಲ್ಲಿ ಮಂತ್ರ ಪಠಣ ಮಾಡಿದ್ರೆ ವಂಶಾಭಿವೃದ್ಧಿ ಸಾಧ್ಯವೆಂದು ನಂಬಲಾಗಿದೆ.
ಸಂತಾನ ಗಣಪತಿ ಸ್ತೋತ್ರವನ್ನು ಪಠಿಸುವುದ್ರಿಂದ ಬುದ್ಧಿವಂತ ಮಗುವನ್ನು ಪಡೆಯಬಹುದು. ಸಂತಾನ ಗಣಪತಿ ಸ್ತೋತ್ರದ ಪಠಣದ ಫಲದಿಂದ ಹುಟ್ಟುವ ಮಗು ಜೀವನದಲ್ಲಿ ಸದಾ ಸುಖವಾಗಿರುತ್ತದೆ.
ಸಂತಾನ ಗಣಪತಿ ಸ್ತೋತ್ರದ ಪಠಣ ಮಾಡಿದ್ರೆ ಜನಿಸುವ ಮಗು ರೋಗಮುಕ್ತವಾಗಿರುತ್ತದೆ. ಹಾಗೆ ಈ ಮಂತ್ರ ಜಪಿಸುವುದ್ರಿಂದ ಮಗುವಿನ ಬುದ್ಧಿಯು ತೀಕ್ಷ್ಣವಾಗುತ್ತದೆ. ಶ್ರೀ ಗಣೇಶನ ಅನುಗ್ರಹ ಮಕ್ಕಳ ಮೇಲೆ ಸದಾ ಇರುತ್ತದೆ. ಮಗು ಬಲಶಾಲಿಯಾಗುತ್ತಾನೆ. ಸಮಸ್ಯೆಗಳಿಗೆ ಹೆದರದೆ ಅದನ್ನು ಎದುರಿಸುವ ಸ್ವಭಾವ ಹೊಂದಿರುತ್ತಾನೆ. ಸಂತಾನ ಗಣಪತಿ ಸ್ತೋತ್ರವನ್ನು ಪಠಿಸುವುದರಿಂದ ಮಗು ಜೀವನದಲ್ಲಿ ಯಶಸ್ಸು ಪಡೆಯುತ್ತದೆ. ಸಂತಾನ ಪ್ರಾಪ್ತಿಗೆ ಹಾಗೂ ಆರೋಗ್ಯವಂತ ಮಗುವಿಗಾಗಿ ಸಂತಾನ ಗಣಪತಿ ಸ್ತೋತ್ರ ಹೇಳಬೇಕು.