ಮೊದಲ ಪೂಜೆ ಗಣೇಶನಿಗೆ ನಡೆಯುತ್ತದೆ. ವಿಘ್ನ ನಾಯಕ, ಮೋಕ್ಷ ಪ್ರದಾಯಕ ಎಂದೆಲ್ಲ ಗಣಪತಿಯನ್ನು ಕರೆಯಲಾಗುತ್ತದೆ. ಗಣೇಶನ ಆರಾಧನೆ ಕಲ್ಯಾಣದಾಯಕ. ಗಣಪತಿ ಆರಾಧನೆಗೆ ದಿನ ಬೇಕಾಗಿಲ್ಲ. ಪ್ರತಿ ದಿನ ವಿನಾಯಕನ ಆರಾಧನೆ ಮಾಡಬಹುದು.
ಭಗವಂತ ಗಣೇಶ ಎಲ್ಲ ರೀತಿಯ ದುಃಖಗಳನ್ನು ದೂರ ಮಾಡ್ತಾನೆ. ಬುದ್ಧಿ ಪ್ರದಾಯಕನಾಗಿದ್ದಾನೆ. ಗಣೇಶನಿಗೆ ಸಂಬಂಧಿಸಿದ ಅನೇಕ ಮಂತ್ರಗಳಿವೆ. ಅದ್ರಲ್ಲಿ ಕೆಲವೊಂದು ಮಂತ್ರ ಕಲ್ಯಾಣಕಾರಿಯಾಗಿದೆ. ಆ ಮಂತ್ರ ಜಪಿಸುವುದ್ರಿಂದ ಎಲ್ಲ ಆಸೆಗಳು ಈಡೇರುತ್ತವೆ. ಯಶಸ್ಸು ಲಭಿಸುತ್ತದೆ.
ಪ್ರತಿಯೊಬ್ಬ ಗಣೇಶನ ಭಕ್ತರು ಪ್ರತಿ ದಿನ ಈ ಕೆಳಗಿನ ಮಂತ್ರಗಳನ್ನು ಜಪಿಸಬೇಕು.
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ ॥
ಈ ಮಂತ್ರ ಜಪಿಸುವುದ್ರಿಂದ ಯಾವುದೇ ಕೆಲಸಕ್ಕೆ ಅಡಚಣೆಯುಂಟಾಗುವುದಿಲ್ಲ ಎಂದು ನಂಬಲಾಗಿದೆ.
ಓಂ ಏಕದಂತಾಯ ವಿಧ್ಮಹೆ
ವಕ್ರತುಂಡಾಯ ಧೀಮಹಿ
ತನ್ನೋ ದಂತಿ ಪ್ರಚೋದಯಾತ್
ಈ ಮಂತ್ರ ಜಪಿಸುವುದ್ರಿಂದ ಗಣೇಶ ಬುದ್ದಿ ನೀಡುತ್ತಾನೆ.
ಓಂ ಗಂ ಗಣಪತಯೇ ನಮಃ
ಇದನ್ನು ಮಹಾಮಂತ್ರವೆಂದು ಪರಿಗಣಿಸಲಾಗಿದೆ. ಇದನ್ನು ಪಠಿಸುವುದ್ರಿಂದ ಗಣೇಶ ಪ್ರಸನ್ನಗೊಳ್ತಾನೆ. ಎಲ್ಲ ಆಸೆ ಈಡೇರುತ್ತದೆ.