
ಹೊಸಪೇಟೆ: ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ತಡರಾತ್ರಿ ಗಣಪತಿ ವಿಸರ್ಜನೆ ವೇಳೆಯಲ್ಲಿ ಕಾಲುವೆಗೆ ಕ್ರೇನ್ ಪಲ್ಟಿಯಾಗಿ ಒಬ್ಬರು ಮೃತಪಟ್ಟಿದ್ದಾರೆ.
ಹೊಸಪೇಟೆ ಹೊರವಲಯದ ಟಿಬಿ ಡ್ಯಾಮ್ ಕಾಲುವೆಯಲ್ಲಿ ಘಟನೆ ನಡೆದಿದೆ. 34 ಅಡಿ ಎತ್ತರದ ಗಣೇಶ ಮೂರ್ತಿ ವಿಸರ್ಜನೆ ವೇಳೆ ದುರಂತ ಸಂಭವಿಸಿದೆ. ಗಣೇಶ ಮೂರ್ತಿ ಸಮೇತ ಕ್ರೇನ್ ಪಲ್ಟಿಯಾಗಿದ್ದು, ಕ್ರೇನ್ ನಡುವೆ ಸಿಲುಕಿ ಅಶೋಕ್(18) ಸಾವನ್ನಪ್ಪಿದ್ದಾರೆ. ಸಾಯಿ ನಿಖಿಲ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.