ಸುನಿಲ್ ಕುಮಾರ್ ನಿರ್ದೇಶನದ ‘ಗಜರಾಮ’ ಸಿನಿಮಾ ಈಗಾಗಲೇ ತನ್ನ ಟೈಟಲ್ ನಿಂದಲೇ ಭರ್ಜರಿ ಸೌಂಡ್ ಮಾಡಿದ್ದು, ಗಣೇಶ ಹಬ್ಬದ ಪ್ರಯುಕ್ತ ಪೋಸ್ಟರ್ ಒಂದನ್ನು ಹಂಚಿಕೊಳ್ಳುವ ಮೂಲಕ ಗಣೇಶ ಹಬ್ಬದ ಶುಭಾಶಯ ತಿಳಿಸಿದೆ. ಸಾಮಾಜಿಕ ಜಾಲತಾಣವಾದ instagram ನಲ್ಲಿ ಈ ಪೋಸ್ಟರ್ ಹಂಚಿಕೊಂಡಿದ್ದು, ”ವಿಘ್ನ ವಿನಾಶಕನು ಎಲ್ಲರ ಬಾಳಲ್ಲಿ ಸುಖ ಶಾಂತಿ ಸಂತೋಷ ತರಲಿ ಎಂದು ಹಾರೈಸುತ್ತೇವೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
ರಾಜ್ವರ್ಧನ್ ಹಾಗೂ ತಪಸ್ವಿ ಪೂಣಚ್ಚ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವನ್ನು ಲೈಫ್ ಲೈನ್ ಫಿಲಂ ಬ್ಯಾನರ್ ನಡಿ ನರಸಿಂಹ ನಿರ್ಮಾಣ ಮಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಸಂಗೀತ ಸಂಯೋಜನೆ ನೀಡಿದ್ದಾರೆ.