ಪ್ರತಿ ವರ್ಷ ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಕುಟುಂಬಸ್ಥರ ಜೊತೆಯಲ್ಲಿ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಮುಂಬೈ ಉಪನಗರದಲ್ಲಿರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಸಾಮಾನ್ಯವಾಗಿ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳಿಂದಲೇ ತುಂಬಿರುತ್ತಿತ್ತು.
2001 ರಿಂದ ಸಲ್ಮಾನ್ ಖಾನ್ ನಿವಾಸವು ಒಂದು ಬಾರಿ ಕೂಡ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸದೇ ಇದ್ದಿದ್ದು ಇಲ್ಲ. ಸಲ್ಮಾನ್ ಖಾನ್ ತಂಗಿ ಅರ್ಪಿತಾ ಖಾನ್ ಎಲ್ಲಾ ಹಬ್ಬಗಳ ಆಚರಣೆಗಳನ್ನು ನೋಡಿಕೊಳ್ತಾರೆ.
ಆದರೆ ಈ ವರ್ಷದ ಹಬ್ಬದಲ್ಲಿ ಸಲ್ಮಾನ್ ಖಾನ್ ಅನುಪಸ್ಥಿತಿ ಇರಲಿದೆ. ಸಹ ನಟಿ ಕತ್ರಿನಾ ಕೈಫ್ ಹಾಗೂ ನಟ ಇಮ್ರಾನ್ ಹಷ್ಮಿ ಜೊತೆಯಲ್ಲಿ ಸಲ್ಲು ಮಿಯಾ ಪ್ರಸ್ತುತ ಟರ್ಕಿಯಲ್ಲಿದ್ದಾರೆ.
ಮದುವೆಗೂ ಮುನ್ನ ಮಕ್ಕಳನ್ನು ಪಡೆಯುತ್ತಿದ್ದಾರೆ ಮಹಿಳೆಯರು..! ಅಧ್ಯಯನದಲ್ಲಿ ಶಾಕಿಂಗ್ ಸಂಗತಿ ಬಹಿರಂಗ
ಟೈಗರ್ 3 ಸಿನಿಮಾದ ಶೂಟಿಂಗ್ಗಾಗಿ ಇವರೆಲ್ಲ ಟರ್ಕಿಯಲ್ಲಿ ನೆಲೆಸಿದ್ದಾರೆ. ಕೋವಿಡ್ 19 ಮಾರ್ಗಸೂಚಿಗಳಿಂದಾಗಿ ಹಬ್ಬಕ್ಕೆ ಮುಂಬೈಗೆ ಬಂದು ತಲುಪುವುದು ಸಲ್ಮಾನ್ ಖಾನ್ಗೆ ಕಷ್ಟವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಚಿತ್ರತಂಡದ ಪ್ರತಿಯೊಬ್ಬ ಸದಸ್ಯರು ಟರ್ಕಿಯಲ್ಲಿ ಬಯೋ ಬಬಲ್ನಲ್ಲಿದ್ದಾರೆ. ಟರ್ಕಿಯಲ್ಲಿ ಶೂಟಿಂಗ್ ಮುಗಿದ ಬಳಿಕ ಚಿತ್ರತಂಡ ಆಸ್ಟ್ರಿಯಾಗೆ ಹಾರಲಿದೆ. ಇಲ್ಲಿ ಸಿನಿಮಾದ ಮುಂದಿನ ಶೂಟಿಂಗ್ ನಡೆಯಲಿದೆ.
ಕೋವಿಡ್ ಕಾರಣದಿಂದಾಗಿ ಈಗಾಗಲೇ ಸಿನಿಮಾ ಶೂಟಿಂಗ್ನಲ್ಲಿ ವಿಳಂಬವಾಗಿದೆ. ಹೀಗಾಗಿ ಇನ್ಯಾವ ಕಾರಣಕ್ಕೂ ಶೂಟಿಂಗ್ನಲ್ಲಿ ವಿಳಂಬ ಮಾಡಲು ಚಿತ್ರತಂಡ ತಯಾರಿಲ್ಲ. ಹೀಗಾಗಿ ಸಲ್ಮಾನ್ ಖಾನ್ ಈ ಬಾರಿ ಹಬ್ಬವನ್ನು ಮಿಸ್ ಮಾಡಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.
ಅಂದಹಾಗೆ ಸಲ್ಮಾನ್ ಖಾನ್ ಹಬ್ಬವನ್ನು ಮಿಸ್ ಮಾಡಿಕೊಳ್ತಿರೋದು ಇದೇ ಮೊದಲೇನಲ್ಲ. 2014ರಲ್ಲಿ ದಬಂಗ್ ನಟ ಚಿಕಿತ್ಸೆಗೆಂದು ಲಾಸ್ ಎಂಜಲೀಸ್ಗೆ ತೆರಳಿದ ವೇಳೆಯಲ್ಲಿಯೂ ಹಬ್ಬವನ್ನು ಮಿಸ್ ಮಾಡಿಕೊಂಡಿದ್ದರು.