ಮಂಗಳೂರು: ಸಂವಿಧಾನ ಬುಡಮೇಲು ಮಾಡಲು ಹಲವು ಶಕ್ತಿಗಳು ಕಾರ್ಯನಿರ್ವಹಿಸುತ್ತಿವೆ. ದೇಶದಲ್ಲಿ ಭಯದ ವಾತಾವರಣ, ಮತೀಯ ಭೇದದ ವಾತಾವರಣ ಇದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಇವರನ್ನು ಎದುರಿಸಲು ಮಹಾತ್ಮ ಗಾಂಧೀಜಿ ಒಂದೇ ತಂತ್ರ. ರಾಷ್ಟ್ರಪಿತ ಗಾಂಧಿಯವರನ್ನು ಕೊಂದ ಗೋಡ್ಸೆ ದೇಶದ ಮೊಟ್ಟಮೊದಲ ಟೆರರಿಸ್ಟ್. ಹಿಂದೂ ಧರ್ಮದ ಮೇಲೆ ನಂಬಿಕೆ ಇಟ್ಟಿದ್ದ ಗಾಂಧಿ ಕೊಂದ. ಮಹಾತ್ಮ ಗಾಂಧಿ ಕೊಂದ ಹಿಂದೂನನ್ನು ಏನೆಂದು ಕರೆಯಬೇಕು? ಮಹಾತ್ಮ ಗಾಂಧಿಗಿಂತಲೂ ದೊಡ್ಡ ಹಿಂದೂ ಯಾರೂ ಇರಲಿಲ್ಲ ಎಂದು ಹೇಳಿದ್ದಾರೆ.
ಬಲಪಂಥೀಯ ಉಗ್ರರು ಗಾಂಧಿಯನ್ನು ವಿಲನ್ ಮಾಡಲು ಯತ್ನಿಸುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಗಾಂಧಿ ಜನ್ಮಸ್ಥಳ ಪೋರಬಂದರ್ ಮಾಫಿಯಾ ನಿಯಂತ್ರಣದಲ್ಲಿದೆ. ಇದು ದೇಶದಲ್ಲಿ ಮಹಾತ್ಮ ಗಾಂಧೀಜಿ ಸ್ಥಿತಿಯನ್ನು ತೋರಿಸುತ್ತಿದೆ. ಯುವಕರಿಗೆ ಸರ್ವಧರ್ಮ ಸಹಬಾಳ್ವೆ ಮನವರಿಕೆ ಮಾಡಿಕೊಡಬೇಕಿದೆ. ವಾಟ್ಸಾಪ್ ಯುನಿವರ್ಸಿಟಿ ಮೂಲಕ ಇಲ್ಲ ಸಲ್ಲದ ವಿವಾದ ಸೃಷ್ಟಿಸುತ್ತಿದ್ದಾರೆ. ಗಾಂಧಿ ಚಿಂತನೆ ಯಾವಾಗ ಮುಗಿಯುತ್ತದೆಯೋ ಅಂದು ದೇಶವು ಮುಗಿಯುತ್ತದೆ ಎಂದು ಹರಿಪ್ರಸಾದ್ ಹೇಳಿದ್ದಾರೆ.