
ಕಲಬುರ್ಗಿ: ಗಾಣಗಾಪುರದಲ್ಲಿ ಅಷ್ಟತೀರ್ಥ ಸ್ನಾನಕ್ಕೆಂದು ಹೋಗಿದ್ದ ಬಾಲಕರಿಬ್ಬರು ನೀರು ಪಾಲಾಗಿರುವ ಘಟನೆ ನಡೆದಿದೆ.
ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದ ಸಂಗಮದ ಅಷ್ಟತೀರ್ಥ ಸ್ನಾನಕ್ಕೆಂದು ಹೋಗಿದ್ದಾಗ ಈ ದುರಂತ ಸಂಭವಿಸಿದೆ. ಪ್ರಕಾಶ್ (15) ಹಾಗೂ ಸೋನು (16) ಮೃತ ಬಾಲಕರು.
ಸೋನು ಎಂಬ ಬಾಲಕ ಸ್ನಾನಕ್ಕೆ ಇಳಿದಿದ್ದ ವೇಳೆ ಕಾಲು ಜಾರಿ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಹೋದ ಇನ್ನೋರ್ವ ಬಾಲಕ ಪ್ರಕಾಶ್ ಕೂಡ ನದಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ. ಇಬ್ಬರು ಬಾಲಕರು ನದಿಯಲ್ಲೇ ಉಸಿರು ಚೆಲ್ಲಿದ್ದಾರೆ.
ಗಾಣಗಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.