alex Certify ಮೆಚ್ಚುಗೆಗೆ ಪಾತ್ರವಾಗಿದೆ ಪಾಕ್ ವಿರುದ್ಧದ ಪರಾಭವ ಬಳಿಕ ಟೀಂ ಇಂಡಿಯಾ ಅಭಿಮಾನಿ ಆಡಿದ ಮಾತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಚ್ಚುಗೆಗೆ ಪಾತ್ರವಾಗಿದೆ ಪಾಕ್ ವಿರುದ್ಧದ ಪರಾಭವ ಬಳಿಕ ಟೀಂ ಇಂಡಿಯಾ ಅಭಿಮಾನಿ ಆಡಿದ ಮಾತು

ಟಿ-20 ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟ್ ತಂಡ ಪಾಕಿಸ್ತಾನದ ವಿರುದ್ಧ ಸೋಲನ್ನನುಭವಿಸಿತು. ಸಾಮಾಜಿಕ ಮಾಧ್ಯಮದಲ್ಲಿ ಎರಡೂ ತಂಡದ ಅಭಿಮಾನಿಗಳು ಪರಸ್ಪರ ನಿಂದನೆ, ಗೇಲಿ, ಅವಾಚ್ಯ ಶಬ್ಧಗಳಿಂದ ನಿಂದಿಸಿರುವುದು ಕಂಡು ಬಂದಿದೆ. ಆದರೀಗ ವೈರಲ್ ಆಗಿರುವ ವಿಡಿಯೋವನ್ನು ಕ್ರಿಕೆಟ್ ನ ಗೆಲುವು ಅಂತಾನೇ ಬಿಂಬಿತವಾಗಿದೆ.

ಶಹಜಾದ್ ಶೆರಾಲಿ ಲಡಾಕ್ ಎಂಬ ಬಳಕೆದಾರರು ಫೇಸ್‌ಬುಕ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಪಂದ್ಯದಲ್ಲಿ ಭಾರತ ಸೋತಿದ್ದಕ್ಕೆ ಎಲ್ಲರೂ ಸಪ್ಪೆ ಮೋರೆ ಹಾಕಿಕೊಂಡು ಹೋದ್ರೆ, ಒಬ್ಬ ಅಭಿಮಾನಿ ಮಾತ್ರ ನಗುತ್ತಿದ್ದ. ಈ ಬಗ್ಗೆ ಅವನಲ್ಲಿ ಕೇಳಿದಾಗ, ನಾನೇಕೆ ನಗಬಾರದು? ನಾವು ನಗದಿದ್ದರೆ, ಯಾರು ನಗುತ್ತಾರೆ? ಎಂದು ಮರುಪ್ರಶ್ನಿಸಿದ್ದಾನೆ.

ಶಿಖರ್ ಧವನ್ ಸ್ಟೈಲ್ ನಕಲು ಮಾಡಿದ ಕೊಹ್ಲಿ: ವಿಡಿಯೋ ವೈರಲ್

ಅಲ್ಲದೆ ಕ್ರಿಕೆಟ್ ಒಂದು ಆಟ. ಇದನ್ನು ಕೇವಲ ಪಂದ್ಯ ಅಂತಷ್ಟೇ ನೋಡಬೇಕು. ಪಾಕಿಸ್ತಾನ ತಂಡವು ಉತ್ತಮವಾಗಿ ಆಡಿದ್ದಾರೆ, ಅವರಿಗೆ ಒಳ್ಳೆಯದಾಗಲಿ ಎಂದು ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿ ಹಾರೈಸಿದ್ದಾರೆ.

ಇನ್ನು ಈ ವಿಡಿಯೋ ನೋಡಿದ ನೆಟ್ಟಿಗರು ಈತನ ಮಾತಿಗೆ ಮನಸೋತಿದ್ದಾರೆ. ಇದು ಕೇವಲ ಆಟ ಎಂದು ತಿಳಿದಾಗ ಕ್ರಿಕೆಟ್ ಗೆ ನಿಜವಾಗಿಯೂ ಜಯ ಸಿಗುತ್ತದೆ ಅಂತೆಲ್ಲಾ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

https://www.youtube.com/watch?v=NopcHZzJIT8&feature=share

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...