ಹೊಸ ವರ್ಷದಂದು ಬಿಡುಗಡೆಯಾಗಲಿದೆ ‘ಗೇಮ್ ಚೇಂಜರ್’ ಟ್ರೈಲರ್ 30-12-2024 9:27PM IST / No Comments / Posted In: Featured News, Live News, Entertainment ರಾಮ್ ಚರಣ್ ಅಭಿನಯದ ಬಹುನಿರೀಕ್ಷಿಸಿದ ‘ಗೇಮ್ ಚೇಂಜರ್’ ಇದೇ ಜನವರಿ 10ರಂದು ತೆರೆ ಕಾಣಲಿದೆ. ಈಗಾಗಲೇ ತನ್ನ ಟೀಸರ್ ಹಾಗೂ ಹಾಡುಗಳಿಂದಲೇ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರದ ಟ್ರೈಲರ್ ಜನವರಿ ಒಂದರಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದೆ. ವಿವೇಕ್ ಈ ಚಿತ್ರದ ಕಥೆ ಬರೆದಿದ್ದು, ಶಂಕರ್ ನಿರ್ದೇಶನ ಮಾಡಿದ್ದಾರೆ. ರಾಮ್ ಚರಣ್ ಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ಅಭಿನಯಿಸಿದ್ದು, ಖ್ಯಾತ ಸಂಗೀತ ನಿರ್ದೇಶಕ ಥಮನ್ ಎಸ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಸಾಯಿ ಮಾಧವ್ ಬುರ್ರಾ ಸಂಭಾಷಣೆ, ಅನ್ಬರಿವ್ ಸಾಹಸ ನಿರ್ದೇಶನ, ಎಸ್ ತಿರುನಾವುಕ್ಕರಸು ಛಾಯಾಗ್ರಹಣ, ಪ್ರಭುದೇವ, ಗಣೇಶ್ ಆಚಾರ್ಯ, ಪ್ರೇಮ್ ರಕ್ಷಿತ್, ನೃತ್ಯ ನಿರ್ದೇಶನವಿದೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಮತ್ತು ಜೀ ಸ್ಟುಡಿಯೋಸ್ ಬ್ಯಾನರ್ ನಲ್ಲಿ ದಿಲ್ ರಾಜು, ಶಿರೀಶ್ ಮತ್ತು ಎಸ್‌ವಿಸಿ – ಆದಿತ್ಯರಾಮ್ ನಿರ್ಮಾಣ ಮಾಡಿದ್ದಾರೆ. View this post on Instagram A post shared by Telugu FilmNagar (@telugufilmnagar)