alex Certify ಬೇಸ್​ ಬಾಲ್​ ಪಂದ್ಯದಲ್ಲಿ ಜೂಜು ಕಟ್ಟಿ 6 ಸಾವಿರ ಕೋಟಿ ರೂ. ಗೆದ್ದ ಭೂಪ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸ್​ ಬಾಲ್​ ಪಂದ್ಯದಲ್ಲಿ ಜೂಜು ಕಟ್ಟಿ 6 ಸಾವಿರ ಕೋಟಿ ರೂ. ಗೆದ್ದ ಭೂಪ…..!

ನ್ಯೂಯಾರ್ಕ್​: ಪಂದ್ಯದಲ್ಲಿ ಬೆಟ್ಟಿಂಗ್​ ಕಟ್ಟುವುದು ಸಾಮಾನ್ಯ. ಹಲವು ಕಡೆ ಇದು ಅಪರಾಧವಾಗಿದ್ದರೂ, ಒಳಗೊಳಗೇ ಈ ಜೂಜಾಟ ನಡೆಯುತ್ತಲೆ ಇರುತ್ತದೆ. ಆದರೆ ಇದು ಅಧಿಕೃತವಾಗಿರುವ ಅಮೆರಿಕದಲ್ಲಿ ಒಬ್ಬ ಈ ರೀತಿ ಜೂಜಾಡಿ 75 ಮಿಲಿಯನ್ ಡಾಲರ್​ (ಸುಮಾರು 6 ನೂರು ಕೋಟಿ ರೂಪಾಯಿ) ಬಹುಮಾನ ಗೆದ್ದಿದ್ದು, ಜೂಜು ಪಂದ್ಯದಲ್ಲಿ ಇದುವರೆಗೆ ಗೆದ್ದ ಅತಿ ದೊಡ್ಡ ಮೊತ್ತ ಎನ್ನಲಾಗಿದೆ.

ಬೇಸ್​ಬಾಲ್​ ಪಂದ್ಯದಲ್ಲಿ ಅಮೆರಿಕದ ಹೌಸ್ಟಾನ್​ ಆಸ್ಟ್ರೋಸ್‌ ತಂಡದ ಪರ ಬೆಟ್ಟಿಂಗ್ ಕಟ್ಟಿರುವ ಜಿಮ್ ಮ್ಯಾಕ್‌ಇಂಗ್‌ವೇಲ್ ಈ ಭಾರಿ ಮೊತ್ತವನ್ನು ಗೆದ್ದಿದ್ದಾನೆ. ಹೂಸ್ಟನ್ ಆಸ್ಟ್ರೋಸ್ ತಂಡವು ಫಿಲಡೆಲ್ಫಿಯಾ ಫಿಲ್ಲಿಸ್ ಅನ್ನು ಗೇಮ್-6 ರಲ್ಲಿ ಸೋಲಿಸಿ ವಿಶ್ವ ಸರಣಿಯನ್ನು ಗೆದ್ದಿತು. ಈ ತಂಡದ ಪರ ಬೆಟ್ಟಿಂಗ್​ ಕಟ್ಟಿದ ಜಿಮ್ ಈ ಮೊತ್ತದ ಹಣವನ್ನು ಪಡೆದು ಭಾರಿ ಸುದ್ದಿಯಾಗಿದ್ದಾನೆ.

ಈ ಹಿಂದೆ ಕೂಡ ಹಲವು ಬೆಟ್ಟಿಂಗ್​ಗಳನ್ನು ಈತ ಗೆದ್ದಿದ್ದು, ಅವುಗಳಲ್ಲಿ ಕೆಲವು ಪಾಲನ್ನು ಸಾಮಾಜಿಕ ಕಾರ್ಯಗಳಿಗೆ ಬಳಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಣವನ್ನು ಕೂಡ ಸದುಪಯೋಗ ಪಡಿಸಿಕೊಳ್ಳುವ ನಂಬಿಕೆ ತಮಗಿದೆ ಎಂದು ಹಲವು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. ಜೂಜಾಟ ಎಲ್ಲಾ ಸಮಯದಲ್ಲಿಯೂ ಕೆಟ್ಟದ್ದಲ್ಲ, ಅದೃಷ್ಟ ಒಂದಿದ್ದರೆ ರಾತ್ರೋ ರಾತ್ರಿ ಇದು ಸಹಸ್ರ ಕೋಟ್ಯಾಧಿಪತಿಯನ್ನಾಗಿಯೂ ಮಾಡಬಲ್ಲುದು, ಅದೃಷ್ಟವಿಲ್ಲದಿದ್ದರೆ ಕೋಟ್ಯಾಧೀಶನನ್ನು ರಾತ್ರೋರಾತ್ರಿ ಬೀದಿಗೆ ತರಬಹುದು ಎಂದು ಹಲವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

https://twitter.com/NetworkChin/status/1589321680375402496?ref_src=twsrc%5Etfw%7Ctwcamp%5Etweetembed%7Ctwterm%5E1589321680375402496%7Ctwgr%5Eae90ddcbf6aa3370ab25feea1a2c7afc412d49fd%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fgambler-mattress-mack-wins-75-million-sets-record-with-astros-world-series-victory-6327829.html

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...