ಗದಗ: ತೋಟದ ಕಾಲವುಗಾರನನ್ನು ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು ರುಂಡವನ್ನು ಕತ್ತರಿಸಿ ಹೊತ್ತೊಯ್ದ ಘಟನೆ ಗದಗ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.
ಮೆಣಸಿನಕಾಯಿ ತೋಟದ ಕಾವಲುಗಾರನಾಗಿದ್ದ ರೈತ ಕಾರ್ಮಿಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯ ಮಾಳೆಕೊಪ್ಪ ಗ್ರಾಮದ ನಿವಾಸಿ ಬಾಲಪ್ಪ ಕೊಪ್ಪದ ಮೃತ ವ್ಯಕ್ತಿ.
ಮೆಣಸಿನಕಾಯಿ ಕಳ್ಳರ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಕಾವಲಿಗಾಗಿ ಬಾಲಪ್ಪ ಅವರನ್ನು ನೇಮಿಸಲಾಗಿತ್ತು. ತೋಟದ ಪಕ್ಕದ ಗುಡಿಸಲಿನಲ್ಲಿ ಮಲಗಿದ್ದ ವೇಳೆ ದುಷ್ಕರ್ಮಿಗಳು ತೋಟಕ್ಕೆ ನುಗ್ಗಿದ್ದಾರೆ. ಈ ವೇಳೆ ಎಚ್ಚೆತ್ತು ತೋಟದತ್ತ ಹೋದ ಬಾಲಪ್ಪನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಆತನ ರುಂಡವನ್ನು ತುಂಡರಿಸಿ ಹೊತ್ತೊಯ್ದಿದ್ದಾರೆ.
ಬಾಲಪ್ಪನ ಹತ್ಯೆಗೆ ಇಡೀ ಗ್ರಾಮಸ್ಥರೇ ಬೆಚ್ಚಿ ಬಿದ್ದಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.