ಗದಗ: ಪಂಚಮಸಾಲಿ ಸಮುದಾಯದವರು ನಡೆಸುತ್ತಿರುವ ಹೋರಾಟ ಮತ್ತೆ ತೀವ್ರಗೊಂಡಿದೆ. ಬೆಳಗಾವಿ ಸುವರ್ಣಸೌಧದ ಬಳಿ ಡಿ.10ರಂದು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ನಡೆಸಿದ್ದ ಪೊಲೀಸರ ಕ್ರಮ ಖಂಡಿಸಿ ಇಂದು ಬೆಳಗಾವಿ, ಗದಗದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಈ ವೇಳೆ ಅವಘಡವೊಂದು ಸಂಭವಿಸಿದೆ.
ಗದಗ ಜಿಲ್ಲೆಯ ಡಿಸಿ ಕಚೇರಿ ಬಳಿ ಪಂಚಮಸಾಲಿ ಸಮುದಾಯದ ಮುಖಂಡರು, ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದು, 2ಎ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಬೆಳಗಾವಿಯಲ್ಲಿ ಪ್ರತಿಭಟನಾಕಾರರ ಮೇಲೆ ನಡೆಸಿರುವ ಲಾಠಿ ಚರ್ಜ್ ನ್ನು ಖಂಡಿಸಿದ್ದಾರೆ.
ಈ ವೇಳೆ ಹೋರಾಟಗಾರರು ಟೈಯರ್ ಗೆ ಬೆಂಕಿ ಹಚ್ಚಲು ಹೋಗಿದ್ದಾರೆ. ಟೈಯರ್ ಗೆ ಹಚ್ಚಿದ ಬೆಂಕಿ ಪ್ರತಿಭಟನಾಕಾರನೊಬ್ಬನ ಕಾಲಿಗೆ ತಗುಲಿದ್ದು, ಗಾಯಗೊಂಡಿರುವ ಘಟನೆ ನಡೆದಿದೆ.
ಘಟನಾ ಸ್ಥಳದಲ್ಲಿ ಪೊಲೀಸರು ದೌಡಾಯಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.