
ಗದಗ: ಮನೆ ಮುಂದೆ ಆಟವಾಡುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿನಾಯಿ ದಾಳಿ ನಡೆಸಿದ್ದು, ಬಾಲಕನ ಸ್ಥಿತಿ ಗಂಭಿರವಾಗಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಅಂಬಾಭವಾನಿ ನಗರದಲ್ಲಿ ನಡೆದಿದೆ.
3 ವರ್ಷದ ರುದ್ರಪ್ರಿಯ ನಾಯಿದಾಳಿಯಿಂದ ಗಂಭೀರ ಸ್ಥಿತಿಯಲ್ಲಿರುವ ಬಾಲಕ. ರುದ್ರಪ್ರಿಯ ತನ್ನ ತಂದೆ-ತಾಯಿ ಜೊತೆ ಸಂಬಂಧಿಕರ ಮನೆಗೆ ಬಂದಿದ್ದ. ಮನೆ ಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ಏಕಾಏಕಿ ಬೀದಿನಾಯಿ ಎಗರಿದ್ದು, ಬಾಲಕನ ಬಾಯಿ, ಹಣೆ, ಗಲ್ಲವನ್ನು ಕಚ್ಚಿ ಗಾಯಗೊಳಿಸಿದೆ.
ಬಾಲಕನ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿನ ಸ್ಥಿತಿ ಕಂಡು ಪೋಷಕರು ಕಣ್ಣೀರಿಟ್ಟಿದ್ದಾರೆ.