
ಗದಗ: ಮಕ್ಕಳ ಕಳ್ಳನೆಂದು ಭಾವಿಸಿ ಗ್ರಾಮಸ್ಥರು ಯುವಕನನ್ನು ಥಳಿಸಿದ ಘಟನೆ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಶಾಲಾ ಮಕ್ಕಳಿಗೆ ಯುವಕ ಬಿಸ್ಕೆಟ್ ಹಂಚುತ್ತಿದ್ದ. ಅನುಮಾನದಿಂದ ಗ್ರಾಮಸ್ಥರು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿ ಯುವಕನನ್ನು ಒಪ್ಪಿಸಿದ್ದಾರೆ. ಕೊಲ್ಕತ್ತಾ ಮೂಲದ ಪ್ರಕಾಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಆರೋಪಿ ಯುವಕನ ಬ್ಯಾಗ್ ನಲ್ಲಿ ಚಾಕು, ಬ್ಲೇಡ್ ಗಳು ಪತ್ತೆಯಾಗಿವೆ. ಗದಗ ಗ್ರಾಮಾಂತರ ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.