ಗದಗ: ಮನೆಯಲ್ಲಿ ಮಲಗಿದ್ದಾಗ ಬಡಿಗೆಯಿಂದ ಹೊಡೆದು ಇಬ್ಬರನ್ನು ಕೊಲೆ ಮಾಡಿದ ಘಟನೆ ಕೆರಳ್ಳಿ ಗ್ರಾಮದಲ್ಲಿ ನಡೆದಿದೆ.
ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಕೆರಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಬಡಿಗೆಯಿಂದ ಹೊಡೆದು ಮಹಾಂತೇಶ್ ಮಾಚೇನಹಳ್ಳಿ(28), ಫಕೀರೇಶ ಮಾಚೇನಹಳ್ಳಿ(17) ಅವರನ್ನು ಹತ್ಯೆ ಮಾಡಲಾಗಿದೆ. ಮಂಜುನಾಥ್ ಎಂಬಾತ ಹತ್ಯೆ ಮಾಡಿದ ಆರೋಪ ಕೇಳಿ ಬಂದಿದೆ.
ಬೆಳಗಿನ ಜಾವ 4:30 ವೇಳೆ ಮನೆಯಲ್ಲಿ ಮಲಗಿದ್ದಾಗ ಬಡಿಗೆಯಿಂದ ಹೊಡೆದು ಹತ್ಯೆ ಮಾಡಲಾಗಿದೆ. ಸ್ಥಳಕ್ಕೆ ಶಿರಹಟ್ಟಿ ಸಿಪಿಐ ವಿಕಾಸ್ ಲಮಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.