ಟೋಕ್ಯೋ ಒಲಿಂಪಿಕ್ಸ್‌ನ ಜಾವೆಲಿನ್ ಎಸೆತದ ಆಟದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟ ನೀರಜ್ ಚೋಪ್ರಾ, 2008ರ ಒಲಿಂಪಿಕ್ಸ್ ಬಳಿಕ ಇದೇ ಮೊದಲ ಬಾರಿಗೆ ದೇಶಕ್ಕೆ ಚಿನ್ನ ತಂದುಕೊಟ್ಟಿದ್ದಾರೆ.
ಚಿನ್ನದ ಪದಕ ಗೆಲ್ಲುತ್ತಲೇ ಭಾರೀ ಖುಷಿಯಲ್ಲಿ ತಮ್ಮ ತಂದೆಯೊಂದಿಗೆ ಮಾತನಾಡಿದ ಚೋಪ್ರಾ, “ನನ್ನ ಗುರುತು ಸ್ಥಾಪಿಸಿರುವೆ ಅಪ್ಪ,” ಎಂದು ಅವರಿಗೆ ತಿಳಿಸಿದ್ದಾರೆ.
ಮಗನ ಸಾಧನೆ ಕುರಿತಂತೆ ಮಾಧ್ಯಮದೊಂದಿಗೆ ಮಾತನಾಡಿದ ಚೋಪ್ರಾ ತಂದೆ ಸತೀಶ್ ಕುಮಾರ್, “ನನ್ನ ಸಂತಸವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ನನಗೆ ಅತೀವ ಸಂತಸವಾಗಿದೆ. ನನ್ನ ಮಗನ ಪರಿಶ್ರಮದಿಂದ ದೇಶದ ಕನಸೊಂದು ಈಡೇರಿದೆ ಎಂದು ತಿಳಿಯಲು ನನಗೆ ಬಹಳ ಖುಷಿಯಾಗುತ್ತದೆ. ನಾವು ರೈತ ಕುಟುಂಬದವರು. ರೈತನಿಗೆ ತನ್ನ ಇಚ್ಛೆಯಂತೆ ಬದುಕಲು ಸಾಕಷ್ಟು ದುಡಿಮೆ ಇರುವುದಿಲ್ಲ. ಸೌಲಭ್ಯಗಳ ಕೊರತೆಯೊಂದಿಗೆ ಬದುಕುತ್ತಿರುವ ಅನೇಕ ಮಂದಿ ಮೂಲ ಸೌಕರ್ಯಗಳ ಪ್ರಾಮುಖ್ಯತೆ ಅರಿತು, ತಮ್ಮ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಧೈರ್ಯ ಹೊಂದಿರುತ್ತಾರೆ ಎಂದು ನಂಬಿದ್ದೇನೆ,” ಎಂದಿದ್ದಾರೆ.
ʼವರ್ಕ್ ಫ್ರಂ ಹೋಂʼ ನಲ್ಲಿರುವ ಉದ್ಯೋಗಿಗಳ ಮೇಲೆ ‘ಸಿಸಿ ಟಿವಿ’ ಕಣ್ಗಾವಲು….!
“ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಚೆನ್ನಾಗಿ ನೋಡಿಕೊಳ್ಳದೇ ಇದ್ದಲ್ಲಿ ನಾವು ಯಶಸ್ಸು ಸಾಧಿಸುವುದು ಸಾಧ್ಯವಿಲ್ಲ ಎಂದು ನಂಬಿದ್ದೇನೆ. ನೀರಜ್ ಸಹ ಅದನ್ನೇ ಮಾಡಿದ್ದಾನೆ. ನಾವು ನಾಲ್ವರು ಸಹೋದರರ ಕುಟುಂಬ. ನಮ್ಮ ಕುಟುಂಬದಲ್ಲಿ ಎಲ್ಲರೂ ಸಹ ನೀರಜ್‌ನನ್ನು ಚೆನ್ನಾಗಿ ನೋಡಿಕೊಂಡು ಆತ ಒಬ್ಬ ಒಳ್ಳೆಯ ಕ್ರೀಡಾಪಟು ಆಗಲು ಎಲ್ಲರೂ ಬೆಂಬಲಿಸಿದ್ದಾರೆ. ಆತನ ಯಶಸ್ಸಿಗೆ ಇಡೀ ಗ್ರಾಮವೇ ಪ್ರಾರ್ಥಿಸಿದೆ. ಚಿನ್ನ ಗೆಲ್ಲುವ ಸಾಮರ್ಥ್ಯ ನಮ್ಮ ಮಗನಲ್ಲಿದೆ ಎಂದು ನಾವೆಲ್ಲಾ ನಂಬಿದ್ದೆವು, ಇಂದು ಆತ ಅದನ್ನು ಸಾಬೀತುಪಡಿಸಿದ್ದಾನೆ!” ಎಂದು ಸತೀಶ್ ಮಗನ ಸಾಧನೆಯ ಬಗ್ಗೆ ಮಾತನಾಡಿದ್ದಾರೆ.