
ಮೈಸೂರು: ನಾನು ಸಾಮಾನ್ಯವಾಗಿ ಮಾಧ್ಯಮಗಳಿಂದ ದೂರ ಇರುತ್ತೇನೆ. ನಾನು ಏನೂ ಮಾತನಾಡಬಾರದು ಎಂದು ಸಾಧ್ಯವಾದಷ್ಟು ಯತ್ನಿಸುತ್ತೇನೆ. ಆದರೂ ನನ್ನ ಬಗ್ಗೆ ಯಾಕೆ ಪದೇ ಪದೇ ಚರ್ಚೆಯಾಗುತ್ತದೆ ಎಂಬುದು ನನಗೆ ಗೊತ್ತಿಲ್ಲ. ನಾನು ಯಾವತ್ತು ಹೇಳುವುದು ಇಷ್ಟೇ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಅದನ್ನು ಬಿಟ್ಟರೆ ನನ್ನ ತಲೆಯಲ್ಲಿ ಬೇರೆ ಯಾವುದೇ ಯೋಚನೆ ಇಲ್ಲ ಎಂದು ಹೇಳಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿ.ಟಿ.ದೇವೇಗೌಡ ನನ್ನ ಗಮನವೆಲ್ಲ. ನಾನು ಕ್ಷೇತ್ರಗಳಲ್ಲಿ ಮಾಡಿರುವ ಅಭಿವೃದ್ದಿ ಕಾರ್ಯಗಳು ಸಿಎಂ ಸಿದ್ದರಾಮಯ್ಯನವರಿಂದಲೂ ಮೆಚ್ಚುಗೆಗೆ ಪಾತ್ರವಾಗಿವೆ ಎಂದರು.
ನಮ್ಮ ತಂದೆ ಪಟೇಲರು. ಅವರ ಮೇಲೆ ಒಂದೇ ಒಂದು ಕೇಸ್ ಇರಲಿಲ್ಲ. ಪಟೇಲರಾಗಿದ್ದರೂ ಯಾವುದೇ ಪ್ರಕರಣ ಇರಲಿಲ್ಲ. ಹಾಗೇ ನಾನು ಚಿಕ್ಕವಯಸ್ಸಿನಿಂದಲೂ ಜವಾಬ್ದಾರಿಯಿಂದ ನಡೆದುಕೊಂಡು ಬಂದವನು. 54 ವರ್ಷಗಳಿಂದ ನಾನು ರಾಜಕೀಯದಲ್ಲಿದ್ದೇನೆ. ಈವರೆಗೆ ನನ್ನ ವಿರುದ್ಧ ಯಾವುದೇ ಕೇಸ್ ದಾಖಲಾಗಿಲ್ಲ. ನನ್ನ ಮಗ ಹರೀಶ್ ಗೌಡ ಮೇಲೂ ಒಂದೇ ಒಂದು ದೂರುಗಳಿಲ್ಲ. ಯಾವುದೇ ಕೇಸ್ ದಾಖಲಾಗಿಲ್ಲ. ನಮ್ಮ ಕುಟುಂಬ ಹೀಗೆ ಒಳ್ಳೆಯರೀತಿಯಿಂದ ನಡೆದುಕೊಂಡು ಬಂದಿದೆ ಎಂದು ಹೇಳಿದರು.
ನಾನು ಶಾಸಕನಾಗಿದ್ದೇನೆ. ಅಧಿಕಾರದಲ್ಲಿದ್ದೇನೆ ಎಂದು ಯಾವುದೇ ದಬ್ಬಾಳಿಕೆ ರಾಜಕೀಯ ಮಾಡುವುದು, ಅಧಿಕಾರಿಗಳನ್ನು ಬೆದರಿಸುವುದು, ಏಕವಚನದಲ್ಲಿ ಮಾತನಾಡಿಸುವುದು ಹೀಗೆ ಎಂದೂ ಮಾಡಿಲ್ಲ, ಮಾಡುವುದೂ ಇಲ್ಲ. ಆದಾಗ್ಯೂ ಅನಗತ್ಯ ಆರೋಪಗಳನ್ನು ಮಾಡುತ್ತ, ನನ್ನ ಬಗ್ಗೆ ಚರ್ಚೆಗಳಾಗುತ್ತಿರುವುದು ಯಾಕೆಂದು ತಿಳಿದಿಲ್ಲ ಎಂದು ಪರೋಕ್ಷವಾಗಿ ರೇವಣ್ಣ ಹೇಳಿಕೆಗೆ ಕಿಡಿಕಾರಿದರು.
ನಾನು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಕಂಡು ಸ್ವತಃ ಸಿಎಂ ಸಿದ್ದರಾಮಯ್ಯನವರು ಹಲವು ಬಾರಿ ಜಿ.ಟಿ.ದೇವೇಗೌಡರಿಗೆ ಇಷ್ಟೊಂದು ಅಭಿವೃದ್ದಿ ಕೆಲಸ ಮಾಡಲು ಹೇಗೆ ಸಾಧ್ಯ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನನಗೆ ನನ್ನ ಕ್ಷೇತ್ರದ ಅಭಿವೃದ್ಧಿ ಕೆಲಸ, ಜನರ ಮಸ್ಯೆಗಳಿಗೆ ಪರಿಹಾರ ನೀಡುವುದರ ಬಗ್ಗೆ ಮಾತ್ರ ಯೋಚನೆ ಹೊರತು ಬೇರೆ ಯಾವುದೇ ರಾಜಕೀಯ ಯೋಚನೆಗಳಿಲ್ಲ ಎಂದರು.