ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಭಾರೀ ಸುದ್ದಿಯಲ್ಲಿದ್ದಾಗಲೇ, ರಾಜ್ಯ ಕಾಂಗ್ರೆಸ್ ವಲಯದಲ್ಲಿ ಚಟುವಟಿಕೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ಈ ಹೊತ್ತಿನಲ್ಲಿ ನಡೆದ ಡಿನ್ನರ್ ಪಾಲಿಟಿಕ್ಸ್, ಬಣ ರಾಜಕೀಯವನ್ನು ಮತ್ತೊಂದು ಆಯಾಮಕ್ಕೆ ತಿರುಗಿಸಿತ್ತು, ಎಲ್ಲವೂ ರಂಪ ರಾಮಾಯಣ ಆಗುತ್ತಿದ್ದ ಹೊತ್ತಿಲ್ಲ ಮದ್ಯ ಪ್ರವೇಶಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಲ್ಲರನ್ನು ಬಾಯಿಮುಚ್ಚಿಸುವ ಕೆಲಸ ಮಾಡಿದ್ದಾರು.
ಇದಾದ ಬಳಿಕ ಗೃಹ ಸಚಿವ ಜಿ. ಪರಮೇಶ್ವರ್, ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭಾನುವಾರದಂದು ಬೆಂಗಳೂರಿನಲ್ಲಿ ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿತ್ತು, ಈ ಬಗ್ಗೆ ಸ್ಪಷ್ಟನೆ ನೀಡಿರುವ ಪರಮೇಶ್ವರ್ ನಾನು ನಿನ್ನೆಯ ದಿವಸ ಯಾವುದೇ ರಾಜಕೀಯ ವಿಚಾರ ಚರ್ಚೆ ಮಾಡಿಲ್ಲ ಎಂದು ಹೇಳಿದ್ದಾರೆ.