
ಈ ವಿಡಿಯೋವನ್ನ ಎಎನ್ಐ ಸುದ್ದಿ ಸಂಸ್ಥೆ ತನ್ನ ಟ್ವಿಟ್ಟರ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೋ ಕ್ಯಾಪ್ಷನ್‌ನಲ್ಲಿ “ಪುಣೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಲೆಜಿಮ್ ನೃತ್ಯಗಾರರೊಂದಿಗೆ ಸೇರಿ ಸಂಭ್ರಮದಿಂದ ಕುಣಿದರು“ ಎಂದು ಬರೆಯಲಾಗಿದೆ. ಈಗಾಗಲೇ ಈ ವಿಡಿಯೋವನ್ನ 38,000 ಹೆಚ್ಚು ಜನರು ವೀಕ್ಷಿಸಿದ್ದಾರೆ.
ಭಾರತ ಅಗಾಧವಾದ ಸಾಂಸ್ಕೃತಿಕ ಸಂಪತ್ತನ್ನ ಹೊಂದಿರುವ ದೇಶ. ಈ ದೇಶದ ಸಂಸ್ಕೃತಿ ವೈವಿಧ್ಯತೆಗೆ ಮಾರು ಹೋಗದವರೇ ಯಾರೂ ಇಲ್ಲ. ಅದಕ್ಕೆ ಈ ವಿಡಿಯೋ ಸಾಕ್ಷಿ ಅಂದರೂ ತಪ್ಪಾಗಲಿಕ್ಕಿಲ್ಲ. ಈ ವಿಡಿಯೋ ನೋಡಿರುವ ಅನೇಕ ನೆಟ್ಟಿಗರು ತಮ್ಮ ತಮ್ಮ ಅಭಿಪ್ರಾಯವನ್ನ ಕಾಮೆಂಟ್ ಬಾಕ್ಸ್‌ನಲ್ಲಿ ವ್ಯಕ್ತಪಡಿಸಿದ್ದಾರೆ. ಎಷ್ಟೋ ಜನರಂತೂ ಈ ವಿಡಿಯೋ ನೋಡಿ “ ಅದ್ಭುತ……. ಅದ್ಭುತ“ ಎಂದು ಬರೆದಿದ್ದಾರೆ.
ಪುಣೆಯಲ್ಲಿ ಎರಡು ದಿನಗಳ ಮಟ್ಟಿಗೆ ಆರಂಭವಾಗಿದ್ದ ಈ ಸಮಾವೇಶದಲ್ಲಿ ಅನೇಕ ವಿಷಯಗಳ ಕುರಿತು ಚರ್ಚೆ ಮಾಡಿದ್ದಾರೆ. ಅದರಲ್ಲಿ ರಾಗಿ ಬೆಳೆ ಹಾಗೂ ಅದರಿಂದ ತಯಾರಾಗುವ ಉತ್ಪನ್ನಗಳ ಪ್ರಾಮುಖ್ಯತೆಯನ್ನ ಚರ್ಚೆ ಮಾಡಿದ್ದಾರೆ. ಇನ್ನೂ ಈ ಸಭೆಯು ಭವಿಷ್ಯದಲ್ಲಿ ನಗರಗಳು ಯಾವ ರೀತಿ ಮಹತ್ವಗಳು ಪಡೆಯಲಿವೆ ಅನ್ನುವ ವಿಷಯ ಕೂಡಾ ಚರ್ಚಿಸಲಾಯಿತು.
ಕಳೆದ ವರ್ಷ ಭಾರತ G20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ. ಇದರ ಪ್ರಯುಕ್ತವಾಗಿ ಅನೇಕ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದೆ . ಈ ಕಾರ್ಯಕ್ರಮದ ನಂತರ ವಿಶ್ವದ ಮಾರುಕಟ್ಟೆಯಲ್ಲಿ ಭಾರತ ಇನ್ನಷ್ಟು ಗಟ್ಟಿಯಾಗಿ ನೆಲೆಯೂರಲಿದೆ ಅನ್ನೊ ಅಭಿಪ್ರಾಯ ವಿಶೇಷಜ್ಞರದ್ದಾಗಿದೆ.