![](https://kannadadunia.com/wp-content/uploads/2021/06/022366.png)
ಸಾಮಾಜಿಕ ಜಾಲತಾಣದಲ್ಲಿ ಕೆಲವು ಹಾಸ್ಯದ ವಿಡಿಯೋಗಳು ವೈರಲ್ ಆಗ್ತಿರುತ್ತವೆ. ದುಃಖ, ನೋವಿನಲ್ಲಿರುವ ಜನರಿಗೆ ಇಂಥ ವಿಡಿಯೋಗಳು ಸ್ವಲ್ಪ ರಿಲ್ಯಾಕ್ಸ್ ನೀಡ್ತವೆ. ಅಂತಹದ್ದೇ ವಿಡಿಯೋ ಒಂದು ಟ್ವಿಟರ್ ನಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕೆಲವರು ನಗ್ತಿದ್ದರೆ ಮತ್ತೆ ಕೆಲವರು ಭಯಗೊಂಡು ಓಡ್ತಿದ್ದಾರೆ.
ಆಪ್ತರ ಸಾವು ನೋವು ನೀಡುವುದು ಸಹಜ. ಆಪ್ತರನ್ನು ಮರೆಯುವುದು ಕಷ್ಟವಾಗುತ್ತದೆ. ಆದ್ರೆ ಶವಪೆಟ್ಟಿಗೆಯಲ್ಲಿದ್ದ ಶವ ಅಚಾನಕ್ ಎದ್ದಾಗ, ಖುಷಿಯಾಗುವುದು ಮಾಮೂಲಿಯಾದ್ರೂ ಆ ಕ್ಷಣ ಆಘಾತ, ಭಯ ಆಗುತ್ತದೆ. ಜನರು ಗಾಬರಿಗೊಳ್ತಾರೆ. ಇಂತಹದ್ದೇ ವಿಡಿಯೋ ಈಗ ವೈರಲ್ ಆಗಿದೆ.
ಶವಪೆಟ್ಟಿಗೆಯಲ್ಲಿ ವ್ಯಕ್ತಿ ನೋಡಿ ಜನರು ಅಳ್ತಿದ್ದಾರೆ. ಈ ಸಂದರ್ಭದಲ್ಲಿ ವ್ಯಕ್ತಿ ಎದ್ದು ಕುಳಿತುಕೊಳ್ತಾನೆ. ಇದನ್ನು ನೋಡಿದ ಜನರು ದಿಕ್ಕಾಪಾಲಾಗಿ ಓಡ್ತಾರೆ. ಶವವೆದ್ದು ಓಡಾಡ್ತಿದ್ದಂತೆ ಸಂಬಂಧಿಕರು, ಆಪ್ತರು ಅಲ್ಲಿಂದ ಓಡ್ತಾರೆ. 20 ಸೆಕೆಂಡಿನ ಈ ವಿಡಿಯೋ ತಮಾಷೆ ವಿಡಿಯೋ ಆಗಿದ್ದು, ಕೆಲವರಿಗೆ ಇದು ಶಾಕ್ ನೀಡಿದ್ರೆ ಮತ್ತೆ ಕೆಲವರ ಹಾಸ್ಯಕ್ಕೆ ಕಾರಣವಾಗಿದೆ. ಈವರೆಗೆ 65 ಸಾವಿರಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದ್ದಾರೆ.
https://twitter.com/HldMyBeer/status/1399494727486029826