ನವದೆಹಲಿ: ಕೊರೋನಾ ಹೊತ್ತಲ್ಲೇ ಮತ್ತೊಂದು ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಕೊರೋನಾ ಪೀಡಿತರ ಮೇಲೆ ಮಾರಕ ಬ್ಲ್ಯಾಕ್ ಫಂಗಸ್ ದಾಳಿ ಮಾಡಿ ಕಾಡತೊಡಗಿದೆ.
ಬ್ಲ್ಯಾಕ್ ಫಂಗಸ್ ದಾಳಿಗೆ ಒಳಗಾದ ಹಲವರಿಗೆ ದೃಷ್ಟಿದೋಷ ಉಂಟಾಗಿದೆ. ಕೊರೋನಾ ಸೋಂಕು ಇಳಿಮುಖವಾಗುತ್ತಿರುವ ಹೊತ್ತಲ್ಲಿ ಸೋಂಕಿತರನ್ನು ಬ್ಲ್ಯಾಕ್ ಫಂಗಸ್ ಎಂಬ ಮತ್ತೊಂದು ಸೋಂಕು ಮಾರಕವಾಗಿ ಕಾಡುತ್ತಿದೆ. ಕಣ್ಣಿನ ಭಾಗ ಊತ, ಮುಖದ ಒಂದು ಭಾಗ ಊದಿಕೊಳ್ಳುವುದು, ಮೂಗು ಕಟ್ಟಿಕೊಳ್ಳುವುದು, ತಲೆನೋವು, ಜ್ವರ, ಕಫ, ಎದೆನೋವು ಉಸಿರಾಟ ತೊಂದರೆ ಮೊದಲಾದ ಲಕ್ಷಣಗಳು ಸೋಂಕಿತರಲ್ಲಿ ಕಾಣಿಸಿಕೊಂಡಿವೆ. ಈಗಾಗಲೇ 600 ಕ್ಕೂ ಅಧಿಕ ಮಂದಿಗೆ ದೆಹಲಿ, ಅಹಮದಾಬಾದ್, ಮುಂಬೈನಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಕಾಣಿಸಿಕೊಂಡಿದೆ. 13 ಜನರು ಇದರಿಂದ ಮೃತಪಟ್ಟಿದ್ದಾರೆ. ಹೆಚ್ಚಿನವರು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.