ಬ್ರಿಟನ್ ರಾಣಿ ಎಲಿಜ಼ಬೆತ್ ಮೃತಪಟ್ಟಲ್ಲಿ ಆಕೆಗೆ ಯಾವೆಲ್ಲಾ ರೀತಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲು ಆಯೋಜಿಸಲಾಗಿದೆ ಎಂಬ ವಿಷಯಗಳಿರುವ ದಾಖಲೆಯೊಂದು ಲೀಕ್ ಆಗಿದೆ.
”ಆಪರೇಷನ್ ಲಂಡನ್ ಬ್ರಿಡ್ಜ್’’ ಹೆಸರಿನ ಈ ದಾಖಲೆಯಲ್ಲಿ, ಬ್ರಿಟನ್ ರಾಣಿ ಮೃತಪಟ್ಟ ದಿನವನ್ನು ”ಡಿ ಡೇ” ಎಂದು ಅಧಿಕಾರಿಗಳು ಕರೆಯುವುದಾಗಿ ಹೇಳಲಾಗಿದ ಎಂದು ’ಪೊಲಿಟಿಕೋ’ ವರದಿ ಮಾಡಿದೆ.
ಗ್ರಾಹಕರಿಗೆ ಮಹತ್ವದ ಮಾಹಿತಿ ನೀಡಿದ SBI
ರಾಣಿ ಮೃತಪಟ್ಟ 10 ದಿನಗಳ ಬಳಿಕ ಆಕೆಯನ್ನು ಹೂಳಲಾಗುವುದು. ಈ ವೇಳೆ ಆಕೆಯ ವಾರಸುದಾರ ಪ್ರಿನ್ಸ್ ಚಾರ್ಲ್ಸ್ ಬ್ರಿಟನ್ ಸುತ್ತಲೂ ಹಾದು ಬರಲಿದ್ದಾರೆ. ಬ್ರಿಟನ್ ಸಂಸತ್ತಿನಲ್ಲಿ ಮೂರು ದಿನಗಳ ಕಾಲ ರಾಣಿಯ ಶವಪೆಟ್ಟಿಗೆ ಇರಲಿದ್ದು, ಈ ವೇಳೆ ಸಹದ್ರಾರು ಮಂದಿ ಲಂಡನ್‌ಗೆ ಆಗಮಿಸಿ ಆಕೆಗೆ ಅಂತಿಮ ಗೌರವ ಸಲ್ಲಿಸಲಿದ್ದಾರೆ ಎಂದು ಅಧಿಕಾರಿಗಳು ನಿರೀಕ್ಷೆಯಲ್ಲಿರಲಿದ್ದಾರೆ.
ಈ ವೇಳೆ ಸಂಭವಿಸಬಹುದಾದ ಜನಸ್ತೋಮ ಹಾಗೂ ಸಂಚಾರ ಸಂಬಂಧಿ ಗೊಂದಲಗಳನ್ನು ಹೋಗಲಾಡಿಸಲು ಭಾರೀ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದಂತೆ. ಇದೇ ವೇಳೆ ಸೇಂಟ್ ಪೌಲ್ ಕೆಥಡ್ರಲ್‌ನಲ್ಲಿ ಸೇವೆಗಳು ಕುಂಠಿತವಾಗಲಿವೆ. ರಾಣಿಯ ಸಾವಿನ ದಿನವು ರಾಷ್ಟ್ರೀಯ ಶೋಕದ ದಿನವಾಗಲಿದೆ ಎಂದು ಬ್ರಿಟನ್ ಪ್ರಧಾನಿ ಹಾಗೂ ರಾಜಮನೆತನದ ನಡುವೆ ಒಪ್ಪಂದವಾಗಿದಯಂತೆ. ಆ ದಿನ ರಜೆ ಇರಲಿದೆ ಎನ್ನಲಾಗಿದೆ.
ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡಲು ಬಕಿಂಗ್‌ಹ್ಯಾಮ್ ಅರಮನೆ ಆಡಳಿತ ನಿರಾಕರಿಸಿದೆ.