alex Certify ಸಾವಿನಲ್ಲೂ ಒಂದಾದರು ಜೊತೆಯಾಗಿ ಜೀವನ ನಡೆಸಿದ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾವಿನಲ್ಲೂ ಒಂದಾದರು ಜೊತೆಯಾಗಿ ಜೀವನ ನಡೆಸಿದ ದಂಪತಿ

ಉಡುಪಿ: ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದಲ್ಲಿ ಸಾವಿನಲ್ಲಿಯೂ ದಂಪತಿ ಜೊತೆಯಾಗಿದ್ದಾರೆ. ಪರಿ ಮೃತಪಟ್ಟ ಬೆನ್ನಲ್ಲೇ ಪತ್ನಿಯೂ ಕೊನೆಯುಸಿರೆಳೆದಿದ್ದಾರೆ.

ಭಾನುವಾರ ರಾತ್ರಿ ಉಪ್ಪುಂದ ಗ್ರಾಮದ ಬೆಸ್ಕೂರು ನಿವಾಸಿಯಾಗಿರುವ ಮುಡೂರ ದೇವಾಡಿಗ(85) ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಅವರ ಪತ್ನಿ ಕೃಷ್ಣಿ ದೇವಾಡಿಗ(77) ಅವರ ಮನೆಯಾದ ಬಿಜೂರಿನಲ್ಲಿ ಮುಡೂರ ದೇವಾಡಿಗ ಕೊನೆಯುಸಿರೆಳೆದಿದ್ದು, ಅವರ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಯುವ ಸಂದರ್ಭದಲ್ಲಿ ಕೃಷ್ಣಿ ದೇವಾಡಿಗ ಕೂಡ ಪತಿಯ ಪಾರ್ಥಿವ ಶರೀರದ ಮುಂದೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಕುಟುಂಬದವರು, ಗ್ರಾಮಸ್ಥರು ಸಾವಿನಲ್ಲೂ ಒಂದಾದ ದಂಪತಿಗೆ ಕಂಬನಿ ಮಿಡಿದು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...