ಬೆಂಗಳೂರು : ಕಳ್ಳತನ ಮಾಡಿ ಅದರಿಂದ ಬಂದ ಹಣದಿಂದ ಬಾಲಿವುಡ್ ನಟಿ, ಹಲವರ ಜೊತೆ ಮೋಜು- ಮಸ್ತಿ ಮಾಡುತ್ತಿದ್ದ ಕುಖ್ಯಾತ ಕಳ್ಳನೋರ್ವನನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸೊಲ್ಲಾಪುರ ಮೂಲದ ಪಂಚಾಕ್ಷರಿ ಸ್ವಾಮಿ (37) ಎಂದು ಗುರುತಿಸಲಾಗಿದೆ. ಮನೆ ಕಳ್ಳತನದಿಂದ ಬಂದ ಹಣದಿಂದ ಈತ ಪ್ರೇಯಸಿಗೆ 3 ಕೋಟಿ ಮನೆ ಖರೀದಿಸಿ ಕೊಟ್ಟಿದ್ದನು.
ಅಲ್ಲದೇ ಬಾಲಿವುಡ್ ಸೇರಿ ಹಲವು ನಟಿಯರ ಸಂಪರ್ಕ ಬೆಳೆಸಿಕೊಂಡಿದ್ದನು. ಅಲ್ಲದೇ ಅವರಿಗಾಗಿ ಕೋಟ್ಯಾಂತರ ಹಣ ಖರ್ಚು ಮಾಡಿದ್ದನು. ಈತನ ವಿರುದ್ಧ ಗುಜರಾತ್, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಕರಣ ದಾಖಲಾಗಿತ್ತು, ಸದ್ಯ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.