alex Certify ಎಚ್ಚರ…! ಕೊರೊನಾ ಲಸಿಕೆಯ ಎರಡೂ ಡೋಸ್‌ ಪಡೆದಿದ್ದರೂ ತಗುಲಬಹುದು ಸೋಂಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಚ್ಚರ…! ಕೊರೊನಾ ಲಸಿಕೆಯ ಎರಡೂ ಡೋಸ್‌ ಪಡೆದಿದ್ದರೂ ತಗುಲಬಹುದು ಸೋಂಕು

ಇನ್ನೇನು ಕೊರೊನಾ ಹಾವಳಿಯ ಆರ್ಭಟ, ಎರಡನೇ ಅಲೆ, ತದನಂತರದ ಮೂರನೇ ಅಲೆಗಳ ಆತಂಕವೆಲ್ಲವೂ ಮುಗಿದೇ ಹೋಯ್ತು ಎಂದು ವಿಶ್ವಾದ್ಯಂತ ಜನರು ನಿಟ್ಟುಸಿರು ಬಿಡುತ್ತಿದ್ದಾರೆ.

ಇದೇ ವೇಳೆಯಲ್ಲಿ, ಚೀನಾದಲ್ಲಿ ಕೊರೊನಾದ ರೂಪಾಂತರಿ ’ಡೆಲ್ಟಾ’ ವೈರಾಣುವಿನ ಆರ್ಭಟ ಶುರುವಾಗಿದೆ. ಅದು ಕೂಡ ನಿತ್ಯ 100 ಜನರಿಗೆ ಡೆಲ್ಟಾ ಕೊರೊನಾ ಸೋಂಕು ತಪ್ಪದೇ ಕಾಣಿಸಿಕೊಳ್ಳುತ್ತಿದೆ. ಈ ರೂಪಾಂತರಿಯು ಇಡೀ ಚೀನಾವನ್ನೇ ನುಂಗಿಕೊಂಡು ಮಹಾಮಾರಿ ಆಗುವುದನ್ನು ತಡೆಯಲು ನಗರಗಳನ್ನೇ ಸಂಪೂರ್ಣವಾಗಿ ಬಂದ್‌ ಮಾಡಲಾಗುತ್ತಿದೆ. ಲಾಕ್‌ ಡೌನ್‌ ತಡೆಯಲು ನಗರಗಳು ’ಶಟ್‌ ಡೌನ್‌’ ಆಗುತ್ತಿವೆ. ಸಂಚಾರವನ್ನು ಪೂರ್ಣ ರೂಪದಲ್ಲಿ ಸ್ಥಗಿತಗೊಳಿಸಲಾಗುತ್ತಿದೆ.

ಇವೆಲ್ಲದರ ನಡುವೆಯೇ ಮತ್ತೊಂದು ಆಘಾತಕಾರಿ ಸುದ್ದಿ ಬಯಲಾಗಿದೆ. ಅದೇನೆಂದರೆ, ಕೊರೊನಾ ತಡೆ ಲಸಿಕೆಯ ಎರಡೂ ಡೋಸ್‌ ಪಡೆದಿದ್ದರೂ ಕೂಡ ಹೊಸ ರೂಪಾಂತರಿಗಳಿಂದ ಕೊರೊನಾ ಸೋಂಕು ಹರಡಬಲ್ಲದು ಎನ್ನುವುದು! ಹೌದು, ಜನಪ್ರಿಯ ವೈದ್ಯಕೀಯ ಜರ್ನಲ್‌ ’ಲ್ಯಾನ್ಸೆಟ್‌’ನಲ್ಲಿ ಈ ವಿಚಾರವನ್ನು ತಜ್ಞ ವೈದ್ಯರುಗಳು ಬಯಲು ಮಾಡಿದ್ದಾರೆ.

ಒಂದು ಮನೆಯಲ್ಲಿ ಐವರು ವಾಸವಾಗಿದ್ದರೆ, ಆ ಪೈಕಿ ಯಾರಾದರೊಬ್ಬರಿಗೆ ’ಡೆಲ್ಟಾ’ ಕೊರೊನಾ ಸೋಂಕು ತಗುಲಿದಲ್ಲಿ, ಬಳಿಕ ಕನಿಷ್ಠ ಮನೆಯ ಇಬ್ಬರಿಗಾದರೂ ಸೋಂಕು ಹರಡೇ ಹರಡುತ್ತದೆಯಂತೆ. ಅದು ಕೂಡ ಸೋಂಕಿನ ಲಕ್ಷಣಗಳು ಯಾವುದೂ ಕೂಡ ಲಸಿಕೆ ಪಡೆದವರಲ್ಲಿ ಗೋಚರವಾಗದೇ ಇರುವುದು ಬಹಳ ಅಪಾಯಕಾರಿ ಎನಿಸುತ್ತಿದೆ.

ವೃದ್ಧರೊಬ್ಬರ ʼಮನಿಕೆ ಮ್ಯಾಗೆ ಹಿತೆʼ ಹಾಡು ಕೇಳಿ ಬಿದ್ದು ಬಿದ್ದು ನಕ್ಕ ಜನ

ಲಸಿಕೆ ಪಡೆದವರು ಒಂದು ದಿನದ ಮಟ್ಟಿಗೆ ಸುಸ್ತು ಅನುಭವಿಸಿ ಎದ್ದು ಕೂತುಬಿಡಬಹುದು. ಆದರೆ, ಲಸಿಕೆ ಪಡೆಯದವರು ಅಥವಾ ಲಸಿಕೆ ಪಡೆದು ಬಹಳ ತಿಂಗಳು ಕಳೆದವರಲ್ಲಿ ಜ್ವರ, ಕೆಮ್ಮು ಹಾಗೂ ಶೀತದ ಲಕ್ಷ ಣಗಳು ಬಹಳ ದಿನಗಳವರೆಗೆ ಗೋಚರವಾಗುತ್ತಲೇ ಇರಲಿವೆ ಎಂದು ಹಿರಿಯ ವೈದ್ಯರ ತಂಡವು ಸದ್ಯ ವಿಶ್ವಾದ್ಯಂತ ಕಂಡುಬರುತ್ತಿರುವ ಕೊರೊನಾ ಲಕ್ಷ ಣಗಳನ್ನು ಅಧ್ಯಯನ ಮಾಡಿ ವರದಿಯಲ್ಲಿ ತಿಳಿಸಿದೆ. ಮನೆಯ ಎಲ್ಲ ಸದಸ್ಯರು ಎರಡೂ ಡೋಸ್‌ ಕೊರೊನಾ ಲಸಿಕೆ ಪಡೆದಿದ್ದರೂ, ಕನಿಷ್ಠ ಒಬ್ಬರಲ್ಲಿ ಡೆಲ್ಟಾ ಸೋಂಕಿನ ಲಕ್ಷಣ ಗೋಚರವಾಗುತ್ತಿದೆ ಎನ್ನುವುದು ಗಮನಾರ್ಹ.

ಅಲ್ಲಿಗೆ ಸದ್ಯ ಮನುಷ್ಯರಿಗೆ ಕೊರೊನಾ ಹಾವಳಿಯಿಂದ ಪೂರ್ಣ ರೂಪದಲ್ಲಿ ಪಾರಾಗಲು ಇರುವ ಒಂದೇ ಮಾರ್ಗ ಎಂದರೆ, ’ಬೂಸ್ಟರ್‌ ಡೋಸ್‌’ ಮಾತ್ರವೇ ಆಗಿದೆ. ಅಂದರೆ, ರೋಗ ನಿರೋಧಕತೆ ಕಡಿಮೆಯುಳ್ಳವರು, ವಯೋವೃದ್ಧರಿಗೆ ಎರಡನೇ ಡೋಸ್‌ ಲಸಿಕೆ ನೀಡಲಾದ 6 ತಿಂಗಳ ಬಳಿಕ ಮತ್ತೊಂದು ಡೋಸ್‌ ಲಸಿಕೆ ನೀಡುವುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...