alex Certify ʼಕೋವಿಡ್​ʼನಿಂದ ಗುಣಮುಖಳಾಗಿ ಎರಡೂ ಲಸಿಕೆ ಸ್ವೀಕರಿಸಿದ್ದ ವೃದ್ಧೆಯಲ್ಲಿ ಡೆಲ್ಟಾ ಪ್ಲಸ್​ ರೂಪಾಂತರಿ ಪತ್ತೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೋವಿಡ್​ʼನಿಂದ ಗುಣಮುಖಳಾಗಿ ಎರಡೂ ಲಸಿಕೆ ಸ್ವೀಕರಿಸಿದ್ದ ವೃದ್ಧೆಯಲ್ಲಿ ಡೆಲ್ಟಾ ಪ್ಲಸ್​ ರೂಪಾಂತರಿ ಪತ್ತೆ..!

ರಾಜಸ್ಥಾನದಲ್ಲಿ ಮೊಟ್ಟ ಮೊದಲ ಡೆಲ್ಟಾ ಪ್ಲಸ್​ ರೂಪಾಂತರಿ ವೈರಸ್​ ಪ್ರಕರಣ ಬೆಳಕಿಗೆ ಬಂದಿದೆ. ಮೇ ತಿಂಗಳಲ್ಲಿ ಕೊರೊನಾದಿಂದ ಗುಣಮುಖರಾಗಿ ಎರಡೂ ಡೋಸ್​ ಲಸಿಕೆಯನ್ನ ಪಡೆದಿದ್ದ 65 ವರ್ಷದ ವೃದ್ಧೆಯಲ್ಲಿ ಈ ರೂಪಾಂತರಿ ವೈರಸ್ ಕಾಣಿಸಿಕೊಂಡಿದೆ. ಈ ವೃದ್ಧೆ ಆರೋಗ್ಯವಾಗಿ ಇದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಈ ಮೂಲಕ ರಾಜಸ್ಥಾನ ಕೂಡ ಡೆಲ್ಟಾ ಪ್ಲಸ್​ ಕಾಣಿಸಿಕೊಂಡ ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಈ ವಿಚಾರವಾಗಿ ಮಾಹಿತಿ ನೀಡಿದ ಪಿಬಿಎಂ ಆಸ್ಪತ್ರೆ ಅಧೀಕ್ಷಕ ಪರಮೇಂದ್ರ ಸಿರೋಹಿ, ರೋಗಿಯ ಸ್ಯಾಂಪಲ್​ ನ್ನು ಮೇ 31ರಂದು ಎನ್​​ಐವಿಗೆ ಕಳುಹಿಸಿಕೊಡಲಾಗಿತ್ತು. ಇದಾಗಿ 25 ದಿನಗಳ ನಂತರ ರಾಜ್ಯ ಸರ್ಕಾರವು ವರದಿಯನ್ನ ಸ್ವೀಕರಿಸಿದ್ದು, ಇದರಲ್ಲಿ ಡೆಲ್ಟಾ ಪ್ಲಸ್​ ಮಾದರಿ ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ಮನೆಯಲ್ಲೇ ಮಹಿಳಾ ಪೊಲೀಸ್ ಮೇಲೆ ಮಾವನಿಂದಲೇ ಅತ್ಯಾಚಾರ, ಸಂತ್ರಸ್ಥೆಗೆ ಗಂಡನಿಂದಲೂ ಬಿಗ್ ಶಾಕ್

ಈ ವಿಚಾರ ಬೆಳಕಿಗೆ ಬಂದ ಬಳಿಕ ವೃದ್ಧೆಯ ಪ್ರಾಥಮಿಕ ಸೋಂಕಿತರ ಮೇಲೂ ನಿಗಾ ಇಡಲಾಗಿದೆ. ಈ ಏರಿಯಾದಲ್ಲಿ ಒಂದು ತಿಂಗಳಿನಿಂದ ಕೊರೊನಾ ಸೋಂಕಿಗೆ ಒಳಗಾದವರನ್ನ ಇನ್ನೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಬಿಕನೇರ್​ ಸಿಎಂಹೆಚ್​ಓ ಒಪಿ ಚಹರ್​ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...