ಫುಲ್ಹ್ಯಾಮ್ ಫುಟ್ಬಾಲ್ ತಂಡವು ನೆಟ್ಟಿಗರ ಹೃದಯಗೆದ್ದಿದೆ. ಗೋಲು ಹೊಡೆದ ನಂತರ ಈ ಆಟಗಾರರು 13 ವರ್ಷದ ಭಿನ್ನ ಸಾಮರ್ಥ್ಯದ ಬಾಲಕನ ಬಳಿ ಬಂದು ಸಂಭ್ರಮಿಸಿದ್ದಾರೆ. ಯುವ ಅಭಿಮಾನಿಯನ್ನು ಆಟಗಾರರು ಅಪ್ಪಿಕೊಂಡಿರುವ ವಿಡಿಯೋ ಸಖತ್ ವೈರಲ್ ಆಗಿದೆ.
13 ವರ್ಷದ ರೈಸ್ ಪೋರ್ಟರ್ ಎಂಬ ಬಾಲಕ ಗೋಲ್ ಗಳಿಸಿದ ನಂತರ ಫುಲ್ಹ್ಯಾಮ್ ಆಟಗಾರರಿಂದ ಅಪ್ಪುಗೆಯನ್ನು ಪಡೆದಿದ್ದಾನೆ. ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಮಾರ್ಕ್ ಟ್ವೊಮಿ ಎಂಬುವವರು ಹಂಚಿಕೊಂಡಿದ್ದಾರೆ. ‘ಸುಂದರ ಆಟದಲ್ಲಿ ಒಂದು ಸುಂದರ ಕ್ಷಣ’ ಎಂಬ ಶೀರ್ಷಿಕೆ ನೀಡಲಾಗಿದೆ. 3 ಮಿಲಿಯನ್ ಗೂ ಹೆಚ್ಚು ಮಂದಿ ಈ ವಿಡಿಯೋ ವೀಕ್ಷಿಸಿದ್ದು, ಭಾರಿ ವೈರಲ್ ಆಗಿದೆ.
ಮದುವೆಯಾಗುವುದಾಗಿ ನಂಬಿಸಿ ಯುವತಿ ಗರ್ಭಿಣಿಯಾದ ನಂತ್ರ ಕೈಕೊಟ್ಟ ಪೊಲೀಸ್…?
ಅಲೆಕ್ಸಾಂಡರ್ ಮಿಟ್ರೊವಿಕ್ 50ನೇ ನಿಮಿಷದಲ್ಲಿ ಗೋಲು ಗಳಿಸಿದ ನಂತರ ಸಹ ಆಟಗಾರರು ಪೋರ್ಟರ್ ಬಳಿ ಜಮಾಯಿಸಿದ್ದಾರೆ. ಗಾಲಿಕುರ್ಚಿಯಲ್ಲಿ ಕುಳಿತಿದ್ದ ಬಾಲಕನನ್ನು ಆಟಗಾರರು ಬಂದು ಖುಷಿಯಿಂದ ತಬ್ಬಿಕೊಂಡಿದ್ದಾರೆ.
ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್ ಪ್ರಕಾರ, ರೈಸ್ ಪೋರ್ಟರ್ ಕ್ವಾಡ್ರಿಪ್ಲೆಜಿಕ್ ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿದ್ದಾರೆ. ಅವರು ಫುಟ್‌ಬಾಲ್ ಕ್ಲಬ್ ಒಂದರ ಗೋಲ್ ಕೀಪರ್ ಆಗಿದ್ದಾರೆ. ಇದು ಅಂಗವಿಕಲ ಆಟಗಾರರಿಗಾಗಿಯೇ ಮೀಸಲಾಗಿದೆ.