ನವದೆಹಲಿ: ಇಂಧನ ಬೆಲೆಗಳನ್ನು ಚುನಾವಣಾ ದಿನಾಂಕಗಳಿಂದ ನಿಯಂತ್ರಿಸಲಾಗುತ್ತದೆ ಹೊರತೂ ಜಾಗತಿಕ ದರಗಳಿಂದಲ್ಲ ಎಂದು ತೈಲ ಬೆಲೆಗಳು 7 ತಿಂಗಳ ಕನಿಷ್ಠಕ್ಕೆ ತಲುಪಿದ ನಂತರ ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ದೇಶದಲ್ಲಿ ಇಂಧನ ಬೆಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಚಾಟಿ ಬೀಸಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಹಣದುಬ್ಬರದ ಹೊರೆಯನ್ನು ಸಾಮಾನ್ಯ ಜನರ ಮೇಲೆ ಹೊರಿಸುವುದರಲ್ಲಿ ಮಾತ್ರ ನಂಬಿದೆ ಎಂದು ಟೀಕಿಸಿದೆ.
ಕಡಿಮೆ ಮತ್ತು ಮಧ್ಯಮ ಆದಾಯದ ವರ್ಗದ ಕುಟುಂಬಗಳಿಗೆ ತಕ್ಷಣದ ಪರಿಹಾರವನ್ನು ಪ್ರತಿ ಲೀಟರ್‌ಗೆ ಪೆಟ್ರೋಲ್ ಮತ್ತು ಡೀಸೆಲ್‌ಗೆ ಕನಿಷ್ಠ 15 ರೂ. ಮತ್ತು ಅಡುಗೆ ಅನಿಲ ಬೆಲೆಯನ್ನು ಸಿಲಿಂಡರ್‌ಗೆ ಕನಿಷ್ಠ 150 ರೂ. ಕಡಿಮೆ ಮಾಡಬೇಕೆಂದು ಹೇಳಲಾಗಿದೆ.
ಮಾಧ್ಯಮ ಸಂವಾದದಲ್ಲಿ ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್, ಯಾವಾಗಲೂ ಹೆಚ್ಚಿನ ಕಚ್ಚಾ ಬೆಲೆಯ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲಾಗುತ್ತಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಚುನಾವಣಾ ದಿನಾಂಕಗಳಿಂದ ನಿಯಂತ್ರಿಸಲಾಗುತ್ತದೆಯೇ ಹೊರತೂ ಜಾಗತಿಕ ದರಗಳಿಂದ ನಿಯಂತ್ರಿಸಲಾಗುತ್ತಿಲ್ಲ. ಚುನಾವಣೆಗಳು ಸಮೀಪಿಸಿದಾಗ ಸರ್ಕಾರ ಬೆಲೆಗಳನ್ನು ಕಡಿಮೆ ಮಾಡುತ್ತದೆ ಅಥವಾ ಅವುಗಳನ್ನು ಫ್ರೀಜ್ ಮಾಡುತ್ತದೆ. ಚುನಾವಣೆ ಮುಗಿದ ನಂತರ ಅವರು ಬೆಲೆಗಳನ್ನು ಹೆಚ್ಚಿಸುತ್ತಾರೆ ಎಂದು ಆರೋಪಿಸಿದರು.
ಎಲ್‌ಪಿಜಿ ಬೆಲೆ ಇಳಿಕೆಯ ಪರಿಹಾರವನ್ನು ಗ್ರಾಹಕರಿಗೆ ವರ್ಗಾಯಿಸದಿರಲು ಕಾರಣವೇನು ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದಾರೆ.
ಕಚ್ಚಾ ತೈಲದ ಬೆಲೆಗಳು ಕಳೆದ ಕೆಲವು ತಿಂಗಳುಗಳಿಂದ ಸತತವಾಗಿ ಇಳಿಮುಖವಾಗಿದೆ ಮತ್ತು ಏಳು ತಿಂಗಳ ಕನಿಷ್ಠ ಮಟ್ಟದಲ್ಲಿದೆ. ಆದರೆ, ನಮ್ಮ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕಡಿಮೆಯಾಗಿಲ್ಲ. ಅಪನಗದೀಕರಣದ ನಂತರವೂ, ಅಂದರೆ ಜಾಗತಿಕ ಬೆಲೆಗೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗಬೇಕು ಎಂದು ಅವರು ಹೇಳಿದರು.
ಕಚ್ಚಾ ತೈಲ ಪ್ರತಿ ಬ್ಯಾರೆಲ್ ಗೆ ಈ ವರ್ಷದ ಜೂನ್ ನಲ್ಲಿ 116 ಡಾಲರ್ ನಿಂದ ಇದೇ ಸೆಪ್ಟೆಂಬರ್ 8 ರಂದು 88 ಡಾಲರ್ ಗೆ ಕುಸಿದಿದೆ. ಇದನ್ನು ಉಲ್ಲೇಖಿಸಿ ಗೌರವ್ ವಲ್ಲಭ್ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.