ಬೆಂಗಳೂರಿನ ನ್ಯೂ ತರಗುಪೇಟೆ ಯಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಜ್ಞರು ಪರಿಶೀಲನೆ ನಡೆಸಿದ್ದು, ಸ್ಪೋಟಕ್ಕೆ ರೀಲ್ ಪಟಾಕಿಯೇ ಕಾರಣ ಎಂದು ಹೇಳಲಾಗಿದೆ.
ರೀಲ್ ಪಟಾಕಿಯ ದೊಡ್ಡ ಡ್ರಮ್ ನೆಲಕ್ಕೆ ಬಿದ್ದು, ಸ್ಪೋಟ ಸಂಭವಿಸಿದೆ. ಎಫ್ಎಸ್ಎಲ್, ಬಾಂಬ್ ನಿಷ್ಕ್ರಿಯ ತಂಡದಿಂದ ಪ್ರಾಥಮಿಕ ಮಾಹಿತಿ ತನಿಖೆ ನಡೆಸಲಾಗಿದೆ. ರೀಲ್ಸ್ ಕ್ಯಾಪ್ಸ್ ಗನ್ ಗಳಲ್ಲಿ ಪಟಾಕಿ ಹಾಕಿ ಹೊಡೆಯಲಾಗುತ್ತದೆ. ಹಿಂದೆ ಮಕ್ಕಳು ರೀಲ್ ಪಟಾಕಿ ಇಟ್ಟು ನೆಲಕ್ಕೆ ಹೊಡೀತಿದ್ದರು. ನಟ್ಟು ಬೋಲ್ಟ್ ನಡುವೆ ರೀಲ್ ಪಟಾಕಿ ಇಟ್ಟು ಹೊಡೆಯಲಾಗುತ್ತಿತ್ತು. ಇಲ್ಲಿಯೂ ಕೂಡ ಬಾಕ್ಸ್ ಬಿದ್ದಾಗ ಅದೇ ರೀತಿಯ ಘಟನೆ ನಡೆದಿದೆ. ಪಟಾಕಿ ರೀಲ್ ದೊಡ್ಡದಿದ್ದು, ಅದು ನೆಲಕ್ಕೆ ಬಿದ್ದಾಗ ಸ್ಪೋಟಿಸಿದೆ ಎಂದು ಹೇಳಲಾಗಿದೆ.