alex Certify ಪಕ್ಕದ ಮನೆಯವರ ಗದ್ದಲ ನಿಲ್ಲಿಸಲು ಹೀಗೊಂದು ಪ್ಲಾನ್‌: ಸುದ್ದಿ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಕ್ಕದ ಮನೆಯವರ ಗದ್ದಲ ನಿಲ್ಲಿಸಲು ಹೀಗೊಂದು ಪ್ಲಾನ್‌: ಸುದ್ದಿ ವೈರಲ್

31 ವರ್ಷ ವಯಸ್ಸಿನ ನವವಿವಾಹಿತ ಮಹಿಳೆ ತನ್ನ ನೆರೆಮನೆಯ ಗದ್ದಲದಿಂದ ರೋಸಿ ಹೋಗಿದ್ದಳು. ಈಕೆ ಮೃದುವಾಗಿ ಮಾತನಾಡುವಂತೆ ನೆರೆ ಮನೆಯವರಿಗೆ ಕೇಳಿಕೊಂಡರೂ ಪ್ರಯೋಜನ ಆಗಲಿಲ್ಲ. ತನ್ನ ಪತಿಯೊಂದಿಗೆ ಈ ಮಹಿಳೆ ಮೇಲಿನ ಮಹಡಿಯಲ್ಲಿ ವಾಸಿಸುತ್ತಿದ್ದಾಳೆ. ಪಕ್ಕದ ಮನೆಯವರು ಪದೇ ಪದೇ ಪಾರ್ಟಿ ಮಾಡುವ ಹಿನ್ನೆಲೆಯಲ್ಲಿ ಇದು ಈ ಯುವ ದಂಪತಿಗೆ ಕಿರಿಕಿರಿ ಆಗುತ್ತಿತ್ತು.

ಎಷ್ಟೇ ಹೇಳಿದರೂ ನೆರೆಮನೆಯವರು ಕೇಳದ ಹಿನ್ನೆಲೆಯಲ್ಲಿ ಹೊಸದೊಂದು ಪ್ಲ್ಯಾನ್‌ ಮಾಡಿದಳು ಈ ಮಹಿಳೆ. ಅದಕ್ಕಾಗಿ ಒಂದು ನೋಟಿಸ್‌ ಅನ್ನು ಗಲಾಟೆ ಮಾಡುತ್ತಿರುವ ಮನೆಯವರ ಬಾಗಿಲಿಸಿ ಅಂಟಿಸಿದರು.

ಅದರಲ್ಲಿ ನೀವು ಮನೆಯಲ್ಲಿ ಮಾತನಾಡಿದ್ದೆಲ್ಲಾ ನಮ್ಮ ಮನೆಗೆ ಕೇಳಿಸುತ್ತದೆ. ಆದ್ದರಿಂದ ನಿಮ್ಮ ಸಂಭಾಷಣೆಗಳು ಖಾಸಗಿಯಾಗಿ ಉಳಿಯುತ್ತಿಲ್ಲ, ಈ ಹಿನ್ನೆಲೆಯಲ್ಲಿ ಸ್ವಲ್ಪ ತಗ್ಗಿಸಿದ ದನಿಯಲ್ಲಿ ಮಾತನಾಡಿ” ಎಂದು ನೋಟಿಸ್‌ನಲ್ಲಿ ಹೇಳಿದಳು.

ಸ್ವಲ್ಪ ದಿನ ಇದು ವರ್ಕ್‌‌ಔಟ್‌ ಆಯಿತು. ಆದರೆ ಮತ್ತದೇ ಗದ್ದಲ ಮುಂದುವರೆಯಿತು. ಇದರಿಂದ ಮತ್ತೆ ಮಹಿಳೆ ರೋಸಿಹೋದಳು. ಈ ಸಲ ಆಕೆ ಗದ್ದಲ ಮಾಡುವ ಮನೆಯವರು ಖಾಸಗಿಯಾಗಿ ಏನೇನು ಮಾತನಾಡುತ್ತಾರೆ ಎನ್ನುವ ಟಿಪ್ಪಣೆಯನ್ನು ಮಾಡಿಕೊಂಡು ಅದನ್ನು ಬರೆದು ಬಾಗಿಲಿಗೆ ಅಂಟಿಸಿದಳು. ಇದನ್ನು ನೋಡಿ ಹೌಹಾರಿದ ನೆರೆಮನೆಯವರು ಅಂದಿನಿಂದ ಗದ್ದಲ ಮಾಡುವುದನ್ನು ನಿಲ್ಲಿಸಿದ್ದಾರೆ ಎಂದು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...