ಭಾನುವಾರದಂದು ದುಬೈನಲ್ಲಿ ನಡೆದ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ, ಶ್ರೀಲಂಕಾ ವಿರುದ್ಧ ಪರಾಭವಗೊಂಡಿದೆ. ಈ ಸೋಲು ಸಹಜವಾಗಿಯೇ ಪಾಕ್ ಕ್ರಿಕೆಟ್ ಪ್ರೇಮಿಗಳಲ್ಲಿ ಆಕ್ರೋಶ ಹುಟ್ಟು ಹಾಕಿದೆ.
ಇದರ ಮಧ್ಯೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಅಧ್ಯಕ್ಷ ರಮೀಝ್ ರಝಾ, ಸೋಲಿನ ಕುರಿತಂತೆ ಪ್ರತಿಕ್ರಿಯೆ ಕೇಳಿದ ಭಾರತೀಯ ಪತ್ರಕರ್ತನೊಂದಿಗೆ ಮೊಬೈಲ್ ಫೋನ್ ಕಿತ್ತುಕೊಂಡು ಅನುಚಿತವಾಗಿ ವರ್ತಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಾರತದ ಕ್ರೀಡಾ ಪತ್ರಕರ್ತ ರೋಹಿತ್ ಜುಗ್ಲಾನ್, ಪಾಕಿಸ್ತಾನ ತಂಡದ ಸೋಲು ಅಭಿಮಾನಿಗಳಿಗೆ ಬೇಸರ ಮೂಡಿಸಿಲ್ಲವೇ ಎಂದು ಕೇಳಿದಾಗ ನೀನು ಭಾರತೀಯನಲ್ಲವೇ, ನಿನಗೆ ಸಂತೋಷವಾಗಿರಬೇಕಲ್ಲ ಎಂದು ರಮೀಝ್ ರಝಾ ಕೇಳಿದ್ದಾರೆ.
ಅಷ್ಟೇ ಅಲ್ಲ, ಆತನ ಫೋನ್ ಕಿತ್ತುಕೊಂಡಿದ್ದು ಬಳಿಕ ವಾಪಸ್ ಮಾಡಿದ್ದಾರೆ. ಇದರ ಜೊತೆಗೆ ಸಲುಗೆಯಿಂದ ತನ್ನ ಹೆಗಲ ಮೇಲೆ ಕೈ ಹಾಕಿದ ಪಾಕಿಸ್ತಾನ ಕ್ರಿಕೆಟ್ ತಂಡದ ಅಭಿಮಾನಿಯ ವಿರುದ್ಧ ರಮೀಝ್ ರಝಾ ಹರಿಹಾಯ್ದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪಿಸಿಬಿ ಅಧ್ಯಕ್ಷರ ವರ್ತನೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.
https://twitter.com/rohitjuglan/status/1569041944755544064?ref_src=twsrc%5Etfw%7Ctwcamp%5Etweetembed%7Ctwterm%5E1569041944755544064%7Ctwgr%5E7ce19106f17ac22a2d0afadbe866d6568cc07ab5%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fopindiaenglish-epaper-opinden%2Ffrustratedramizrajatriestosnatchphoneofindianjournalistoverquestionaboutpakistanslossinasiacupwatchvideo-newsid-n421859394%3Fs%3Dauu%3D0x61fbe37283098391ss%3Dwsp