alex Certify ವೇದಗಳನ್ನು ಕಲಿಸಲು ಉಚಿತ ಶಾಲೆ ತೆರೆಯಲು ಮುಂದಾದ ಕಲಾವಿದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೇದಗಳನ್ನು ಕಲಿಸಲು ಉಚಿತ ಶಾಲೆ ತೆರೆಯಲು ಮುಂದಾದ ಕಲಾವಿದ

ಕ್ರಿಕೆಟಿಗ ಡ್ವೇನ್ ಬ್ರಾವೋ ಜೊತೆಗೆ ಜನಪ್ರಿಯ ’ಚಾಂಪಿಯನ್’ ಆಲ್ಬಂ ಸೃಷ್ಟಿಸಿದ ವಿಕ್ರಂ ರಾಜು ಇದೀಗ ತೆಲಂಗಾಣದಲ್ಲಿ ಮಕ್ಕಳಿಗೆ ಉಚಿತವಾಗಿ ವೇದಗಳು ಮತ್ತು ಉಪನಿಷತ್ತುಗಳನ್ನು ಕಲಿಸುವ ಶಾಲೆ ಆರಂಭಿಸಲು ಮುಂದಾಗಿದ್ದಾರೆ.

ಯಜುರ್ವೇದ ಮತ್ತು ಅಥರ್ವ ವೇದದಲ್ಲಿ ಉಲ್ಲೇಖಿಸಲಾಗಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಹದಿಹರೆಯದ ಮಂದಿಗೆ ಕಲಿಸಲು ಎಂಟು ವರ್ಷಗಳ ಕಾಲ ವಿಶಿಷ್ಟ ಪಠ್ಯಕ್ರಮ ಸಿದ್ಧಪಡಿಸಿದ್ದಾರೆ ವಿಕ್ರಂ. ವೇದಯುಗದ ಕಾಲದ ಆಟಗಳು, ಸಮರಕಲೆ, ಸೇರಿದಂತೆ ಅನೇಕ ರೀತಿಯ ಕಲೆಗಳ ವಿಚಾರಗಳನ್ನು ಒಳಗೊಂಡಂತೆ ಪಠ್ಯಕ್ರಮ ಅಭಿವೃದ್ಧಿಪಡಿಸಿದ್ದಾರೆ.

ಇಲ್ಲಿದೆ ಆರೋಗ್ಯಕರ ‘ಕರಿಬೇವಿನ ಚಟ್ನಿ ಪುಡಿ’ ಮಾಡುವ ವಿಧಾನ

ಇದಕ್ಕಾಗಿ ಇಂಡಿಯನ್ ವೇದಿಕ್ ಸ್ಕೂಲ್ ಹೆಸರಿನಲ್ಲಿ ಸಂಸ್ಥೆಯೊಂದನ್ನು ಹುಟ್ಟುಹಾಕಿರುವ ವಿಕ್ರಂ, ವೇದಗಳು ಮತ್ತು ಉಪನಿಷತ್ತುಗಳನ್ನು ಇಂದಿನ ತಲೆಮಾರಿಗೆ ಕಲಿಸಿಕೊಡುವ ಉದ್ದೇಶದಿಂದ ಈ ಕೆಲಸಕ್ಕೆ ಮುಂದಾಗಿದ್ದಾರೆ.

“ನನಗೆ ಬೇರಾವ ಆಸಕ್ತಿ ಇಲ್ಲ, ಆದರೂ ನನಗೆ ಹಿಂದೂ ಕೃತಿಗಳು, ಪುರಾಣಗಳು ಮತ್ತು ವೇದಗಳ ಮೇಲೆ ಬಾಲ್ಯದಿಂದಲೂ ಒಲವಿದೆ. ವೇದಗಳನ್ನು ಅರ್ಥ ಮಾಡಿಕೊಂಡು ಜ್ಞಾನ ಬೆಳೆಸಿಕೊಳ್ಳಬೇಕೆಂಬ ಆಸೆಯಿಂದ ನಾನು ತಮಿಳುನಾಡಿನಿಂದ ಕಾಶ್ಮೀರದವರೆಗೂ ದೇಶಾದ್ಯಂತ ಅನೇಕ ದೇವಸ್ಥಾನಗಳಲ್ಲಿರುವ ಬ್ರಾಹ್ಮಣ ವಿದ್ವಾಂಸರನ್ನು ಭೇಟಿ ಮಾಡಿದ್ದೇನೆ. ನಾನು ವೇದಗಳ ಬಗ್ಗೆ ಸಾಕಷ್ಟು ಓದಿದ್ದೇನೆ. ಇದೇ ಪ್ರಕ್ರಿಯೆಯಲ್ಲಿ ನಾನು ಐರೋಪ್ಯ ಮತ್ತು ಏಷ್ಯಾದ ಅನೇಕ ದೇಶಗಳಿಗೂ ಭೇಟಿ ಕೊಟ್ಟು, ವೇದಗಳು ಮತ್ತು ಸಂಸ್ಕೃತ ಕಲಿಸುವ ಅನೇಕ ವಿವಿಗಳನ್ನು ಸಂದರ್ಶಿಸಿದ್ದೇನೆ.

ಆಂಧ್ರ ಪ್ರದೇಶದ ತಿರುಮಲದಲ್ಲಿ ನಾಲ್ಕು ವೇದಗಳಲ್ಲಿ ಕಲಿಸಲಾಗುತ್ತದೆ ಆದರೆ ಬರೀ ಬ್ರಾಹ್ಮಣ ಸಮುದಾಯಕ್ಕೆ ಮಾತ್ರವೇ ಪ್ರವೇಶ ನೀಡಲಾಗುತ್ತದೆ. ಮಿಕ್ಕ ಶಾಲೆಗಳಲ್ಲೂ ಇದೇ ಕಥೆ. ಆದರೆ ಇಂಡಿಯನ್ ವೇದಿಕ್ ಸ್ಕೂಲ್‌ನಲ್ಲಿ, ವೇದಗಳ ಬಗ್ಗೆ ಆಸಕ್ತಿ ಇರುವ ಮಂದಿ ಜಾತಿಯ ಬೇಧವೇ ಇಲ್ಲದೇ ಬಂದು ಸೇರಿ ಕಲಿಯಬಹುದಾಗಿದೆ. ನಾವು ಸದ್ಯ ವೇದಿಕ್ ಮಂಡಳಿಯೊಂದನ್ನು ಸ್ಥಾಪಿಸಲು ನೋಡುತ್ತಿದ್ದೇವೆ” ಎನ್ನುತ್ತಾರೆ ವಿಕ್ರಂ ರಾಜು.

ರಾಮಾಯಣ, ಮಹಾಭಾರತದಂಥ ಮಹಾ ಕೃತಿಗಳು, ಕಳರಿಪಯಟ್ಟುವಿನಂಥ ಸಮರಕಲೆಗಳು, ಭಗವದ್ಗೀತೆ, ಶ್ಲೋಕ, ಗೀತ ಮಂತ್ರಗಳು, ತಂತ್ರಗಳು ಸೇರಿದಂತೆ ವೈದಿಕ ಕಾಲದ ಅನೇಕ ವಿದ್ಯೆಗಳ ಬಗ್ಗೆ ಅರಿವು ಮೂಡಿಸುವ ಶಾಲೆ ಸ್ಥಾಪಿಸುವ ಉದ್ದೇಶದಿಂದ ತಾವು ಸದ್ಯ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶ ಸರ್ಕಾರಗಳ ಜೊತೆಗೆ ಮಾತುಕತೆಯಲ್ಲಿರುವುದಾಗಿ ಹೇಳಿದ್ದಾರೆ ವಿಕ್ರಂ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...