ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಮೇಲೆ ಕೋವಿಡ್-19 ಸಾಂಕ್ರಾಮಿಕ-ಪ್ರೇರಿತ ನಿರ್ಬಂಧಗಳ ಸುಮಾರು ಎರಡು ವರ್ಷಗಳ ನಂತರ, ವಿಮಾನ ಪ್ರಯಾಣವು ಈಗ ಅದರ ಸಾಮಾನ್ಯ ಸಂಚಾರ ಪುನರಾರಂಭಿಸಿದೆ. ಆದಾಗ್ಯೂ, ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಮಿಡ್-ಫ್ಲೈಟ್ ನಿದರ್ಶನಗಳು ಪ್ರಯಾಣಿಕರು, ಸಿಬ್ಬಂದಿ ಸದಸ್ಯರು ಮತ್ತು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.
ದೇಶೀಯ ವಿಮಾನಯಾನ ಸಂಸ್ಥೆಗಳು ಯಾಂತ್ರಿಕ ದೋಷಗಳು, ಪ್ರಯಾಣಿಕರಿಂದ ಅನುಚಿತ ವರ್ತನೆ, ಪ್ರಯಾಣಿಕರನ್ನು ತಪ್ಪಾಗಿ ನಿರ್ವಹಿಸುವುದು ಇತ್ಯಾದಿ ನಡೆಯುತ್ತಲೆ ಇದೆ. ಎರಡು ಏರ್ ಇಂಡಿಯಾ ವಿಮಾನಗಳು ಪಾನಮತ್ತ ಪ್ರಯಾಣಿಕರನ್ನು ಒಳಗೊಂಡ ಘಟನೆಗಳೂ ನಡೆದಿವೆ. ಪ್ರಯಾಣಿಕಳ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆಯೂ ನಡೆದಿದೆ.
ಇದೀಗ ನ್ಯೂಯಾರ್ಕ್-ದೆಹಲಿ ವಿಮಾನದಲ್ಲಿ ಕುಡುಕನೊಬ್ಬ ಸಹ-ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜಿಸಿದ್ದು, ಏರ್ ಇಂಡಿಯಾ ಪ್ಯಾರಿಸ್-ದೆಹಲಿ ವಿಮಾನದಲ್ಲಿ ಪಾನಮತ್ತ ಪ್ರಯಾಣಿಕನೊಬ್ಬ ಮಹಿಳಾ ಪ್ರಯಾಣಿಕರೊಬ್ಬರ ಸೀಟಿನ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆಗಳು ನಡೆದಿವೆ.
ಇಂತಹ ಘಟನೆಗಳು ಪದೇ ಪದೇ ಆಗುತ್ತಿರುವುದನ್ನು ಗಮನಿಸಿದ ಜನರು ಅಂತರರಾಷ್ಟ್ರೀಯ ವಿಮಾನಗಳಲ್ಲಿ ಮದ್ಯವನ್ನು ನೀಡುವ ಬಗ್ಗೆ ಪ್ರಶ್ನಿಸಿದ್ದಾರೆ. ಇದನ್ನು ತೆಗೆದು ಹಾಕುವಂತೆ ಒತ್ತಾಯಗಳು ಕೇಳಿಬರುತ್ತಿವೆ. ಈ ಬಗ್ಗೆ ಸುದ್ದಿಗಳು ವೈರಲ್ ಆಗುತ್ತಿವೆ. ಆದರೆ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮದ್ಯಸೇವನೆಗೆ ಅವಕಾಶ ನೀಡಬೇಕು ಎಂದಿದ್ದಾರೆ.