
ರೈಲುಗಳು, ಬಸ್ಗಳ ಜತೆಗೆ ನಿತ್ಯದ ಓಡಾಟಕ್ಕೆ ಕಷ್ಟವಾಗಿ ಬಿಡುತ್ತದೆ. ಆದರೆ ಇದೇ ಋುತುವಿನಲ್ಲಿ ಹಿಮಚ್ಛಾದಿತ ಪ್ರದೇಶಗಳ ಸುಂದರತೆಯನ್ನು ಕಣ್ತುಂಬಿಕೊಳ್ಳಲು ವಿವಿಧ ರಾಜ್ಯಗಳ ಜನರು ಗುಡ್ಡಗಾಡು ನಗರಗಳಿಗೆ ಭೇಟಿ ಕೊಡುತ್ತಾರೆ.
ಮುಖ್ಯವಾಗಿ ಶಿಮ್ಲಾನಗರ, ದೇಶದಲ್ಲೇ ಅತ್ಯಂತ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರವಾಸಿ ತಾಣಗಳಲ್ಲಿ ಒಂದು. ಇಂಥ ಹಿಮಚ್ಛಾದಿತ ನಗರಗಳಲ್ಲಿನ ರೈಲು ನಿಲ್ದಾಣಗಳಲ್ಲಿ ರೈಲ್ವೆ ಹಳಿಗಳು, ನಿಲ್ದಾಣಗಳು ಹಿಮದಿಂದ ಪೂರ್ಣ ಆವೃತವಾಗಿರುವ ಫೋಟೊ ಮತ್ತು ವಿಡಿಯೋಗಳನ್ನು ಭಾರತೀಯ ರೈಲ್ವೆ ಇಲಾಖೆಯು ಟ್ವಿಟರ್ನಲ್ಲಿ ಹಂಚಿಕೊಂಡಿದೆ.
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ-ಬನಿಹಾಲ್ ನಿಲ್ದಾಣ, ಅದರ ಮಾರ್ಗದಲ್ಲಿ ಪ್ರಯಾಣ, ಕಾಲ್ಕಾದಿಂದ ಶಿಮ್ಲಾವರೆಗಿನ ರೈಲು ಮಾರ್ಗ ಹಿಮದಿಂದ ಆವೃತವಾಗಿರುವುದು. ವಿಶೇಷವಾಗಿ ಯುನೆಸ್ಕೊದ ಮಾನ್ಯತೆ ಪಡೆದಿರುವ 91ನೇ ನಂಬರ್ ಟನಲ್ ಒಳಗೆ ಆಟಿಕೆ ರೈಲು ಸಾಗುವ ವಿಡಿಯೊಗಳು ಭಾರಿ ವೈರಲ್ ಆಗಿವೆ.
ಕೊರೊನಾ ನಿರ್ಬಂಧಗಳಿಲ್ಲದೇ ಇದ್ದರೆ ತಪ್ಪದೇ ಹೋಗಬಹುದಿತ್ತು ಎಂದು ಅನೇಕರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಎಷ್ಟು ಬಾರಿ ನೋಡಿದರೆ ತೃಪ್ತಿಯಾಗದ ಸೌಂದರ್ಯ ಎಂದು ಅನೇಕ ಯುವತಿಯರು ಶಿಮ್ಲಾದ ಸೊಬಗಿಗೆ ಮಾರುಹೋಗಿದ್ದಾರೆ. ಭೂಮಿಯ ಮೇಲಿನ ಸ್ವರ್ಗ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕೂಡ ಹಿಮಚ್ಛಾದಿತ ಪ್ರದೇಶಗಳ ಫೋಟೊ ಹಂಚಿಕೊಂಡಿದ್ದಾರೆ. ಅದರಲ್ಲೂ ಶ್ರೀನಗರ ರೈಲು ನಿಲ್ದಾಣ ಅವರ ನೆಚ್ಚಿನ ತಾಣವಂತೆ.