
ಜ್ಯೋತಿಷ್ಯದಲ್ಲಿ ಗ್ರಹಗಳ ಬದಲಾವಣೆಗೆ ಮಹತ್ವವಿದೆ. ಗ್ರಹಗಳ ಬದಲಾವಣೆ ನಮ್ಮ ಜಾತಕದ ಮೇಲೆ ಪರಿಣಾಮ ಬೀರುತ್ತದೆ. ವೃಷಭ ಮತ್ತು ತುಲಾ ರಾಶಿಯ ಅಧಿಪತಿಯಾಗಿರುವ ಶುಕ್ರ ಗ್ರಹವು ಸೆಪ್ಟೆಂಬರ್ 24 ರಂದು ರಾತ್ರಿ 8 ಗಂಟೆ 51 ನಿಮಿಷಕ್ಕೆ ಕನ್ಯಾ ರಾಶಿಗೆ ಸಾಗಲಿದೆ. ಶುಕ್ರನ ಈ ರಾಶಿ ಬದಲಾವಣೆ ಎಲ್ಲ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ವಿಶೇಷವಾಗಿ ನಾಲ್ಕು ರಾಶಿಗಳ ಮೇಲೆ ಸಕಾರಾತ್ಮಕ ಪ್ರಭಾವವುಂಟಾಗಲಿದೆ.
ವೃಷಭ ರಾಶಿ : ಶುಕ್ರ, ವೃಷಭ ರಾಶಿಯ ಅಧಿಪತಿಯಾಗಿದ್ದಾನೆ. ಶುಕ್ರನು ಸೆಪ್ಟೆಂಬ್ 24ರಂದು ರಾಶಿ ಬದಲಾವಣೆ ಮಾಡ್ತಿದ್ದಂತೆ ವೃಷಭ ರಾಶಿಯವರ ಅದೃಷ್ಟ ಬದಲಾಗಲಿದೆ. ರಾಶಿ ಬದಲಾವಣೆ ಈ ರಾಶಿಯವರಿಗೆ ಲಾಭದಾಯಕವೆಂದು ಪರಿಗಣಿಸಲಾಗಿದೆ. ಕೌಟುಂಬಿಕ ಸಮಸ್ಯೆಗಳಿಂದ ಪರಿಹಾರ ಸಿಗಲಿದೆ. ಆರ್ಥಿಕ ಕ್ಷೇತ್ರದಲ್ಲಿ ವೃದ್ಧಿಯಾಗಲಿದೆ. ಸಮಾಜದಲ್ಲಿ ಪ್ರತಿಷ್ಠೆ ಮತ್ತು ಗೌರವ ಹೆಚ್ಚಾಗಲಿದೆ.
ಮಿಥುನ ರಾಶಿ : ಶುಕ್ರ ಗ್ರಹದ ರಾಶಿ ಬದಲಾವಣೆ ಮಿಥುನ ರಾಶಿ ಮೇಲೂ ಪರಿಣಾಮ ಬೀರಲಿದೆ. ಮಿಥುನ ರಾಶಿಯ ಮುಖ್ಯ ಗ್ರಹ ಬುಧ. ಬುಧ ಮತ್ತು ಶುಕ್ರ ಗ್ರಹಗಳ ನಡುವೆ ಸ್ನೇಹ ಭಾವನೆ ಇದೆ. ಶುಕ್ರ ರಾಶಿ ಬದಲಾವಣೆ ಮಾಡುತ್ತಿದ್ದಂತೆ ಆರ್ಥಿಕ ವೃದ್ಧಿಯನ್ನು ಈ ರಾಶಿಯವರು ಕಾಣಲಿದ್ದಾರೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಪ್ರಾಪ್ತಿಯಾಗಲಿದೆ. ಕುಟುಂಬದಲ್ಲಿ ಶಾಂತಿ ಸಿಗಲಿದೆ. ಪ್ರಯಾಣಕ್ಕೆ ತೆರಳುವ ಸಾಧ್ಯತೆಯಿದೆ.
ಕನ್ಯಾ ರಾಶಿ : ಶುಕ್ರ ರಾಶಿ ಬದಲಾವಣೆ ಮಾಡುವುದು ಕನ್ಯಾ ರಾಶಿಗೆ ಮಂಗಳಕರವೆಂದು ಸಾಬೀತಾಗಲಿದೆ. ಕನ್ಯಾ ರಾಶಿಯವರಿಗೆ ಶುಭ ಸುದ್ದಿ ಸಿಗಬಹುದು. ಆರ್ಥಿಕ ಜೀವನದಲ್ಲಿ ಪ್ರಗತಿಯಾಗಲಿದೆ. ಸಿಕ್ಕಿಬಿದ್ದ ಹಣ ಮರಳಿ ಸಿಗಲಿದೆ.