
ರೇಂಜ್ ರೋವರ್ ಇವೋಕ್(Range rover evoque)
52 ಲಕ್ಷದಿಂದ ಶುರುವಾಗೊ ಈ ಕಾರಿನ ಬೆಲೆ 69.53 ಲಕ್ಷದವರೆಗೆ ಸಾಗುತ್ತದೆ. ಮಾಹಿತಿಗಳ ಪ್ರಕಾರ ರವಿತೇಜಾ ಅವರು ಈ ವೇರಿಯಂಟ್ ನ ಟಾಪ್ ಮಾಡೆಲ್ ಹೊಂದಿದ್ದಾರೆ. ಅಂದ್ರೆ ಇವರ ಕಾರಿನ ಬೆಲೆ 70ಲಕ್ಷ, ಆಟೋಮ್ಯಾಟಿಕ್ ಸಿಸ್ಟಮ್ ಇರುವ ಈ ಕಾರು ಒಂಬತ್ತು ಬಣ್ಣಗಳಲ್ಲಿ ಸಿಗುತ್ತದೆ. ರವಿತೇಜಾ ಅವ್ರು ಕಪ್ಪು ಬಣ್ಣದ ಕಾರ್ ಖರೀದಿಸಿದ್ದಾರೆ.
ಬಿಎಮ್ಡಬ್ಲ್ಯೂ-ಎಂ6(BMW-M6)
ಭಾರತೀಯರಲ್ಲಿ ಅತ್ಯಂತ ಜನಪ್ರಿಯವಾಗಿರೊ ಈ ಕಾರ್, ರವಿತೇಜಾಗು ಫೇವರಿಟ್ ಅಂತೆ. ಒಳ್ಳೆ ಔಟ್ ಲುಕ್ ಇರುವ ಈ ಗಾಡಿಯ ಇಂಟೀರಿಯರ್ ತುಂಬಾ ಲಕ್ಷುರಿಯಾಗಿದೆ. ರವಿತೇಜಾ ಅವ್ರ ಬಳಿ ಬಿಎಮ್ಡಬ್ಲ್ಯೂ ಎಂ6 ವೇರಿಯಂಟ್ ಇದ್ದು, ಇದರ ಬೆಲೆ 1.24ಕೋಟಿ.
ಮರ್ಸಿಡಿಸ್ ಬೆಂಜ್ ಎಸ್- ಕ್ಲಾಸ್ (Mercedes Benz S-Class)
ಮರ್ಸಿಡಿಸ್ ಬೆಂಜ್ ಪ್ರತಿಯೊಬ್ಬ ಕಾರ್ ಪ್ರೇಮಿಯ ಡ್ರೀಮ್ ಕಾರ್ ಅಂದ್ರೆ ತಪ್ಪಾಗಲ್ಲ. ಸಿಕ್ಕಾಪಟ್ಟೆ ಎಕ್ಸ್ ಪೆನ್ಸಿವ್ ಆಗಿರೊ ಈ ಕಾರಿನ ಅತ್ಯಂತ ಜನಪ್ರಿಯ ವೇರಿಯಂಟ್ ಮರ್ಸಿಡಿಸ್ ಬೆಂಜ್ ಎಸ್- ಕ್ಲಾಸ್ ರವಿತೇಜಾ ಅವ್ರ ಕಾರ್ ಕಲೆಕ್ಷನ್ ನಲ್ಲಿದೆ. ಇದರ ಬೆಲೆ 2.23 ಕೋಟಿ.
ವಿಭಿನ್ನ ಪಾತ್ರಗಳನ್ನು ಮಾಡುತ್ತಾ ಜನ್ರ ಮನಸ್ಸಲ್ಲಿ ಮನೆ ಮಾಡಿರೊ ರವಿತೇಜಾ ಕಾರ್ ಕಲೆಕ್ಷನ್ ಕೂಡ ಅಷ್ಟೇ ವಿಭಿನ್ನವಾಗಿದೆ. ಕಿಲಾಡಿ ಚಿತ್ರದ ಮೂಲಕ ದೊಡ್ಡ ಪರದೆಗೆ ವಾಪಸ್ಸಾಗುತ್ತಿರೊ ರವಿತೇಜಾ ಅವ್ರು, ಇದೇ ಚಿತ್ರದ ಮೂಲಕ ಬಾಲಿವುಡ್ ನಲ್ಲು ಮ್ಯಾಜಿಕ್ ಮಾಡೋಕೆ ರೆಡಿಯಾಗಿದ್ದಾರೆ.