alex Certify ಇಲ್ಲಿದೆ ಐಪಿಎಲ್​ ಫ್ರಾಂಚೈಸಿ ತಂಡಗಳ ಮಹಿಳಾ ಮಾಲೀಕರ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಐಪಿಎಲ್​ ಫ್ರಾಂಚೈಸಿ ತಂಡಗಳ ಮಹಿಳಾ ಮಾಲೀಕರ ಪಟ್ಟಿ

ಇಂಡಿಯನ್​ ಪ್ರೀಮಿಯರ್​ ಲೀಗ್​ ಅಂದರೆ ಅಲ್ಲಿ ಆಟ, ಸ್ಪರ್ಧೆ, ಗ್ಲಾಮರ್​ ಹೀಗೆ ಎಲ್ಲವೂ ತುಂಬಿರುತ್ತದೆ. ಈ ಆಟವು ಕೇವಲ ಕ್ರಿಕೆಟಿಗರಿಗಾಗಿ ಮಾತ್ರವಲ್ಲದೇ ಅನೇಕ ಬಾರಿ ಫ್ರಾಂಚೈಸಿ ಮಾಲೀಕರ ಕಾರಣದಿಂದಲೂ ಪ್ರಸಿದ್ಧಿ ಪಡೆದದ್ದು ಇದೆ.

ಶಿಲ್ಪಾ ಶೆಟ್ಟಿಯಿಂದ ಹಿಡಿದು ಪ್ರಸ್ತುತ ಕವಿಯಾ ಮಾರನ್​​ವರೆಗೂ ಐಪಿಎಲ್​ ತಂಡದ ಮಹಿಳಾ ಮಾಲಕರು ಅಭಿಮಾನಿಗಳಿಗೆ ಹಬ್ಬದೂಟ ಬಡಿಸಿದ್ದಂತೂ ಸುಳ್ಳಲ್ಲ. ಹಾಗಾದ್ರೆ ಐಪಿಎಲ್​ ಕಂಡ ಸುಂದರ ಮಾಲೀಕರ ಪಟ್ಟಿ ಇಲ್ಲಿದೆ ನೋಡಿ.

ಶಿಲ್ಪಾ ಶೆಟ್ಟಿ :

ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಈ ಹಿಂದೆ ರಾಜಸ್ಥಾನ ರಾಯಲ್ಸ್​ ತಂಡದ ಮಾಲೀಕರಾಗಿದ್ದರು. ರಾಜಸ್ಥಾನ ರಾಯಲ್ಸ್​ ತಂಡವು 2008ರಲ್ಲಿ ಐಪಿಎಲ್​ ಟ್ರೋಫಿಯನ್ನು ಗೆದ್ದಿದೆ.

ಪ್ರೀತಿ ಜಿಂಟಾ :

ಬಾಲಿವುಡ್​ ನಟಿ ಪ್ರೀತಿ ಜಿಂಟಾ ಪಂಜಾಬ್​ ಕಿಂಗ್ಸ್​ ತಂಡದ ಸಹ ಮಾಲೀಕರಾಗಿದ್ದಾರೆ. ಈ ಹಿಂದೆ ಕಿಂಗ್ಸ್​ ಇಲೆವನ್​ ಪಂಜಾಬ್​ ಎಂಬ ಹೆಸರನ್ನು ಹೊಂದಿದ್ದ ಈ ತಂಡವು ಈ ವರ್ಷದಿಂದ ಪಂಜಾಬ್​ ಕಿಂಗ್ಸ್​​ ಎಂದು ಹೆಸರು ಬದಲಾಯಿಸಿಕೊಂಡಿದೆ.

ಕವಿಯಾ ಮಾರನ್​ :

ಕವಿಯಾ ಮಾರನ್​​ ಸನ್​ರೈಸರ್ಸ್​ ಹೈದರಾಬಾದ್​ ತಂಡ ಸಿಇಓ ಹಾಗೂ ಸನ್​ ಗ್ರೂಪ್​ನ ಮಾಲೀಕ ಕಲಾನಿಧಿ ಮಾರನ್​ ಪುತ್ರಿ. ಮೈದಾನದಲ್ಲಿ ಸನ್​ರೈಸರ್ಸ್​ ತಂಡವನ್ನು ಬೆಂಬಲಿಸುತ್ತಿರುವ ಕವಿಯಾ ಮಿಸ್ಟರಿ ಗರ್ಲ್​ ಎಂದೇ ಫೇಮಸ್​ ಆಗಿದ್ದಾರೆ.

ಜೂಹಿ ಚಾವ್ಲಾ :

ಬಾಲಿವುಡ್​ ನಟಿ ಜೂಹಿ ಚಾವ್ಲಾ ಕೊಲ್ಕತ್ತಾ ನೈಟ್​ ರೈಡರ್ಸ್​ ತಂಡದ ಸಹ ಮಾಲೀಕರಾಗಿದ್ದಾರೆ. ಬಾಲಿವುಡ್​ ನಟ ಶಾರೂಕ್​ ಖಾನ್​ ಈ ತಂಡದ ಮಾಲೀಕರಾಗಿದ್ದಾರೆ. ಕೊಲ್ಕತ್ತಾ ನೈಟ್​ ರೈಡರ್ಸ್​ ಎರಡು ಬಾರಿ ಐಪಿಎಲ್​ ಟ್ರೋಫಿಯನ್ನು ಗೆದ್ದಿದೆ.

ಗಾಯತ್ರಿ ರೆಡ್ಡಿ :

ವೆಂಕಟರಾಮ ರೆಡ್ಡಿ ಪುತ್ರಿ ಗಾಯತ್ರಿ ರೆಡ್ಡಿ ಡೆಕ್ಕನ್​ ಚಾರ್ಜಸ್​ ತಂಡದ ಮಾಲೀಕರಾಗಿದ್ದರು.

ವೆಂಕಟರಾಮ ರೆಡ್ಡಿ ಡೆಕ್ಕನ್​ ಕ್ಲೋರಿನಕಲ್​ ಪ್ರೈವೇಟ್​ ಲಿಮಿಟೆಡ್​ ಮಾಲೀಕರು ಸಹ ಹೌದು. ದಕ್ಷಿಣ ಆಫ್ರಿಕಾದಲ್ಲಿ ಡೆಕ್ಕನ್​ ಚಾರ್ಜಸ್​ ತಂಡವು ಐಪಿಎಲ್​ ಟ್ರೋಫಿಯನ್ನು ಗೆದ್ದಿತ್ತು. ಬಳಿಕ ಈ ತಂಡವು ಮಾರಾಟವಾದ ಬಳಿಕ ಸನ್​ರೈಸರ್ಸ್​ ಹೈದರಾಬಾದ್​ ಎಂಬ ಹೆಸರನ್ನು ಪಡೆದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...