ಆಗಸ್ಟ್ 15ರಂದು ಲಾಂಚ್ ಆದ ಎಸ್1 ಒಂದು ಲಕ್ಷ ರೂಪಾಯಿಯ ಆರಂಭಿಕ ಬೆಲೆ (ಎಕ್ಸ್-ಶೋರೂಂ) ಹೊಂದಿದ್ದು, ಎಸ್1 ಪ್ರೋ 1,30,000 ರೂಪಾಯಿಯಷ್ಟಿದೆ. ಸೆಪ್ಟೆಂಬರ್ 8ರಿಂದ ಈ ಎರಡೂ ಸ್ಕೂಟರ್ ಗಳ ಡೆಲಿವರಿಗಳನ್ನು ದೇಶಾದ್ಯಂತ 1000ಕ್ಕೂ ಹೆಚ್ಚು ಪಟ್ಟಣಗಳಲ್ಲಿ ಮಾಡಲಾಗುವುದು. ಅಲ್ಲಿವರೆಗೂ 499 ರೂ. ತೆತ್ತು ಈ ಸ್ಕೂಟರ್ ಬುಕ್ ಮಾಡಬಹುದಾಗಿದೆ.
181 ಕಿಮೀ ಕಾರ್ಯಾಚರಣಾ ವ್ಯಾಪ್ತಿ ಜೊತೆಗೆ 115ಕಿಮೀ/ಗಂಟೆ ಟಾಪ್ ಸ್ಪೀಡ್ ಇರುವ ಓಲಾ ಎಸ್1 ಬ್ಯಾಟರಿಯನ್ನು 40 ನಿಮಿಷಗಳಲ್ಲಿ ಪೂರ್ಣ ಚಾರ್ಜಿಂಗ್ ಮಾಡಬಹುದಾಗಿದೆ ಎಂದು ಕಂಪನಿ ತಿಳಿಸಿದೆ.
ತಮಿಳುನಾಡಿನಲ್ಲಿ 500 ಎಕರೆ ಜಾಗದಲ್ಲಿ ಇವಿ ಸ್ಕೂಟರ್‌ಗಳ ಉತ್ಪಾದನಾ ಘಟಕ ಆರಂಭಿಸುತ್ತಿರುವುದಾಗಿ ಓಲಾ ತಿಳಿಸಿದೆ.
ಸಿಂಪಲ್ ಒನ್
ಸಿಂಪಲ್ ಎನರ್ಜಿಯ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಸಹ ಆಗಸ್ಟ್ 15ರಂದೇ ಲಾಂಚ್ ಆಗಿದೆ. 1,947 ರೂ. ಪಾವತಿ ಮಾಡಿ ಈ ಸ್ಕೂಟರ್ ಬುಕ್ ಮಾಡಬಹುದಾಗಿದ್ದು, ಎಕ್ಸ್ ಶೋರೂಂ ಬೆಲೆ 1,10,000 ರೂಪಾಯಿಯಷ್ಟಿದೆ.
ಒಂದು ಚಾರ್ಜ್‌ಗೆ 236 ಕಿಮೀ ಓಡಬಲ್ಲ ಸಿಂಪಲ್ ಒನ್ 105ಕಿಮೀ/ಗಂಟೆಯ ಟಾಪ್ ಸ್ಪೀಡ್ ಹೊಂದಿದೆ ಎನ್ನಲಾಗಿದೆ.
ಒಮೆಗಾ ಜ಼ೋರೋ ಮತ್ತು ಫಿಯಾರೆ
ಇವಿ ದ್ವಿಚಕ್ರದ ವಿಭಾಗಕ್ಕೆ ಎಂಟ್ರಿ ಕೊಟ್ಟಿರುವ ಒಮೆಗಾ ಸೆಯ್ಕೀ ಮೊಬಿಲಿಟಿ ಜ಼ೋರೋ ಮತ್ತು ಫಿಯಾರೆ ಹೆಸರಿನಲ್ಲಿ ಎರಡು ಸ್ಕೂಟರ್‌ಗಳನ್ನು ಪರಿಚಯಿಸಿದೆ. ಸಿಂಗಲ್ ಚಾರ್ಜ್‌ನಲ್ಲಿ 85ಕಿಮೀ ಕ್ರಮಿಸಬಲ್ಲ ಈ ಸ್ಕೂಟರ್‌ಗಳು 45ಕಿಮೀ/ಗಂಟೆಯ ಟಾಪ್ ಸ್ಪೀಡ್ ಹೊಂದಿವೆ.
ಅಥರ್ 450 ಎಕ್ಸ್
ಒಂದು ಚಾರ್ಜ್‌ಗೆ 116 ಕಿಮೀ ಕ್ರಮಿಸಬಲ್ಲ ಅಥರ್ 450ಎಕ್ಸ್ 80ಕಿಮೀ/ಗಂಟೆಯ ಟಾಪ್ ಸ್ಪೀಡ್ ಹೊಂದಿದ್ದು, 0-40ಕಿಮೀ ವೇಗವನ್ನು 3.3 ಸೆಕೆಂಡ್‌ಗಳಲ್ಲಿ ಪಿಕ್ ಅಪ್ ಮಾಡುತ್ತದೆ. ಈ ಸ್ಕೂಟರ್‌ನ ಬೆಲೆ 1,44,500 ರೂಪಾಯಿ.
ಟಿವಿಎಸ್ ಐಕ್ಯೂಬ್
ದೇಶದ ದ್ವಿಚಕ್ರ ವಾಹನಗಳ ಮಾರುಕಟ್ಟೆ ದಿಗ್ಗಜ ಟಿವಿಎಸ್ ಮೋಟರ್ ಕಂಪನಿ ಇವಿ ಕ್ಷೇತ್ರಕ್ಕೂ ಕಾಲಿಟ್ಟಿದೆ. ಐಕ್ಯೂಬ್ ಎಲೆಕ್ಟ್ರಿಕ್ ಹೆಸರಿನಲ್ಲಿ ಇವಿ ಸ್ಕೂಟರ್ ಬಿಡುಗಡೆ ಮಾಡಿರುವ ಟಿವಿಎಸ್ ಈ ಸ್ಕೂಟರ್ ಬೆಲೆಯನ್ನು 1,15,218 ರೂಪಾಯಿಗೆ ನಿಗದಿ ಮಾಡಿದೆ.
ಒಂದು ಪೂರ್ಣ ಚಾರ್ಜ್ ಮೇಲೆ 75 ಕಿಮೀ ಕ್ರಮಿಸಬಲ್ಲ ಐಕ್ಯೂಬ್ 78ಕಿಮೀ/ಗಂಟೆಯ ಟಾಪ್ ಸ್ಪೀಡ್ ಹೊಂದಿದೆ.