
ಭಾರತದಲ್ಲಿ ನಡೆಯುವ ಚುನಾವಣೆ ಒಂದಲ್ಲಾ ಒಂದು ರೀತಿ ವಿಶೇಷವಾಗಿರುತ್ತವೆ. ಚುನಾವಣೆಯ ಒಂದಲ್ಲಾ ಒಂದು ವಿಚಾರ ವೈರಲ್ ಆಗುತ್ತದೆ. ಅದೇ ರೀತಿ ಉತ್ತರಪ್ರದೇಶದಲ್ಲಿ ಇಂದು ನಡೆಯುತ್ತಿರುವ ಮೂರನೇ ಹಂತದ ಚುನಾವಣೆಯಲ್ಲಿ ನವವಧು ಒಬ್ಬಳು ಮತದಾನ ಮಾಡಿ ತನ್ನ ಕರ್ತವ್ಯ ಮೆರೆದಿದ್ದಾಳೆ.
ಉತ್ತರಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ಜೂಲಿ ಎಂಬ ನವವಧು ನೆನ್ನೆ ತಾನೇ ಹೊಸ ಜೀವನಕ್ಕೆ ಕಾಲಿಟ್ಟಿದ್ದಾಳೆ. ಇಂದು ಆಕೆ ತನ್ನ ತವರು ಮನೆಯಿಂದ ಅತ್ತೆ ಮನೆಗೆ ಹೊರಡುವ ಶಾಸ್ತ್ರ ನಡೆಯುತ್ತಿತ್ತು. ಇದರ ನಡುವೆಯೇ ತನ್ನ ಕರ್ತವ್ಯ ಮರೆಯದ ಜೂಲಿ, ತನ್ನ ಗಂಡನೊಂದಿಗೆ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ.
BIG NEWS: ಕಾಂಗ್ರೆಸ್ ಧರಣಿಗೆ ಟಾಂಗ್ ನೀಡಿದ ಸಚಿವ ಆರ್.ಅಶೋಕ್
ಗಂಡನ ಮನೆಗೆ ಹೊರಡುವುದಕ್ಕೆ ಕೆಂಪು ಲೆಹಂಗಾ ಧರಿಸಿ ಶೃಂಗಾರಗೊಂಡಿದ್ದ ಜೂಲಿ ಮತದಾನ ಮಾಡಲು ಅದೇ ಬಟ್ಟೆ ಧರಿಸಿ ಬಂದಿದ್ದರು. ಒಟ್ಟಿನಲ್ಲಿ ತನ್ನ ಜೀವನದ ಅತ್ಯಂತ ದೊಡ್ಡ ಘಟ್ಟದಲ್ಲೂ ಜೂಲಿ ತನ್ನ ಮತದಾನದ ಕರ್ತವ್ಯ ಮರೆಯದಿರುವುದು, ಇತರರಿಗೂ ಸ್ಪೂರ್ತಿದಾಯಕವಾಗಿದೆ.