ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ತಮ್ಮ ಜೀವನದ ಅನೇಕ ಸಂದರ್ಭಗಳ ನೆನಪುಗಳನ್ನು ಆಗಾಗ ತಮ್ಮ ಅನುಯಾಯಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು.
ಇನ್‌ಸ್ಟಾಗ್ರಾಂನಲ್ಲಿ ನಟಿ ತುಹೀನಾ ವೋಹ್ರಾ ಗಾನಕೋಗಿಲೆಯ ಜೀವನದ ಕೆಲವೊಂದು ಆಸಕ್ತಿಕರ ಕ್ಷಣಗಳ ಬಗ್ಗೆ ವಿವರ ಹಂಚಿಕೊಂಡಿದ್ದಾರೆ. ಲತಾರನ್ನು ಆಕೆಯ ಅಜ್ಜ ಹಾಗೂ ಸಂಗೀತ ನಿರ್ದೇಶಕ ಅನಿಲ್ ಬಿಸ್ವಾಸ್ ಆರಂಭದಲ್ಲಿ ತಯಾರಿ ಮಾಡಿದ್ದರಂತೆ. ಹಾಡುವಾಗ ಪದಗಳನ್ನು ಮುರಿಯದೇ ಹಾಡುವ ಕಲೆಯನ್ನು ಲತಾಗೆ ಅನಿಲ್ ಕಲಿಸಿಕೊಟ್ಟಿದ್ದರಂತೆ.
ಪಾಕ್ ಕ್ರಿಕೆಟ್‌ಗೆ 1990 ರಲ್ಲಿ ಆಗಿದ್ದು ಈಗ ಭಾರತ ತಂಡದಲ್ಲಿ ಆಗುತ್ತಿದೆ: ರಶೀದ್ ಲತೀಫ್ ಹೇಳಿಕೆ
“ಇದು ನನ್ನ ಅಜ್ಜ, ಕಾಂಪೋಸರ್ ಅನಿಲ್ ಬಿಸ್ವಾಸ್ ಹಾಗೂ ಸಂಗೀತ ಲೋಕದ ದಂತಕಥೆ ಲತಾ ಮಂಗೇಶ್ಕರ್ ರ ಚಿತ್ರ. ಹಾಡುವಾಗ ಉಸಿರಾಟದ ಮೇಲೆ ನಿಯಂತ್ರಣ ಹಾಗೂ ಸಾಲುಗಳನ್ನು ಮುರಿಯದಂತೆ ಹಾಡುವ ಕಲೆಯನ್ನು ಆತ ಲತಾ ಅವರಿಗೆ ಕಲಿಸಿಕೊಟ್ಟಿದ್ದರು,” ಎಂದು ತುಹೀನಾ ಹೇಳಿಕೊಂಡಿದ್ದಾರೆ. ಲತಾಗೆ ಮಾಂಸಾಹಾರ ಬಹಳ ಇಷ್ಟವಿದ್ದು, ಕೆಲವೊಮ್ಮೆ ಖುದ್ದು ತನ್ನ ಅಜ್ಜ ಆಕೆಗಾಗಿ ಅಡುಗೆ ಮಾಡಿಕೊಡುತ್ತಿದ್ದರು ಎಂದು ತುಹೀನಾ ಹೇಳಿಕೊಂಡಿದ್ದಾರೆ.
ಪೋಸ್ಟ್‌ನಲ್ಲಿರುವ ಮತ್ತೊಂದು ಚಿತ್ರದ ಬಗ್ಗೆ ಮಾತನಾಡಿರುವ ತುಹೀನಾ, “ಎರಡನೇ ಚಿತ್ರವು ಲತಾರ ವೈಯಕ್ತಿಕ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ತಾರೆದೋನಿಂದ ದಾದರ್‌ನಲ್ಲಿರುವ ನನ್ನ ಅಜ್ಜನ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಲತಾ ಅಲ್ಲಿ ಅವರೊಂದಿಗೆ ಸಂಗೀತದ ಅಭ್ಯಾಸ ಮಾಡುತ್ತಿದ್ದರು ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಒಂದೊಮ್ಮೆ ತಮ್ಮ ಮನೆ ಇದ್ದ ಜಾಗದಲ್ಲಿ ಫ್ಲೈಓವರ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಅರಿತಿದ್ದ ಲತಾ, ಹಾಗೇನಾದರೂ ಮಾಡಿದಲ್ಲಿ, ಮುಂಬಯಿ ಬಿಟ್ಟು ಪುಣೆಯಲ್ಲಿರುವ ತಮ್ಮ ಮನೆ ಅಥವಾ ಕೊಲ್ಲಾಪುರದ ತಮ್ಮ ಹಿರೀಕರ ಮನೆ ಸೇರುವುದಾಗಿ ಸರ್ಕಾರಕ್ಕೆ ಹೇಳಿದ್ದರು ಎಂದ ತುಹೀನಾ, “ಈ ಹೆಸರನ್ನು ದೇಶದ ಮಂದಿ ಮಿಸ್ ಮಾಡಿಕೊಳ್ಳಲಿದ್ದಾರೆ,” ಎಂದಿದ್ದಾರೆ. ನೆಟ್ಟಿಗರೊಬ್ಬರ ಕಾಮೆಂಟ್‌ಗೆ ಪ್ರತಿಕ್ರಿಯಿಸಿದ ತುಹೀನಾ, ಲತಾ ಮಂಗೇಶ್ಕರ್ ಅವರಿಗೆ ಛಾಯಾಗ್ರಹಣ ಹಾಗೂ ಕ್ರಿಕೆಟ್ ಮೇಲೆ ಭಾರೀ ಆಸಕ್ತಿ ಇತ್ತೆಂದು ತಿಳಿಸಿದ್ದಾರೆ.