ಪ್ರಧಾನಿ ನರೇಂದ್ರ ಮೋದಿ ಆಡಳಿತ ವೈಖರಿ, ಮಾತುಗಾರಿಕೆ ಜೊತೆಗೆ ಅವರ ಡ್ರೆಸ್ ಕೋಡ್ ಕೂಡ ಗಮನಾರ್ಹ ಸಂಗತಿ. ಸಮಯ ಸಂದರ್ಭಕ್ಕೆ ತಕ್ಕಂತೆ ಕಾಣಿಸಿಕೊಳ್ಳುವ ಮೋದಿ ಆ ಸಭೆ ಸಮಾರಂಭದಲ್ಲಿ ಗಮನ ಸೆಳೆಯುತ್ತಾರೆ. ಅದರಲ್ಲೂ ಸಾಂಪ್ರದಾಯಿಕ ದೇಸಿ ಅವತಾರದಲ್ಲಿ ಕಾಣಿಸಿಕೊಂಡು ಜನರ ಮನ ಗೆಲ್ಲುವುದು ಅವರದೊಂದು ಕಲೆ ಎನಿಸಿ ಬಿಡುತ್ತದೆ.
ಪ್ರಧಾನಿ ನರೇಂದ್ರ ಮೋದಿಯವರ ಸಾಂಪ್ರದಾಯಿಕ ದೇಸಿ ಅವತಾರಗಳನ್ನು ಗಮನಿಸುವುದಾದರೆ, ನಾಗಾಲ್ಯಾಂಡ್‌ನಲ್ಲಿ ನಡೆದ ಹಾರ್ನ್‌ಬಿಲ್ ಉತ್ಸವದಲ್ಲಿ ಪ್ರಧಾನಿ ಮೋದಿ ಸಾಂಪ್ರದಾಯಿಕ ನಾಗಾ ಯೋಧರ ಟೋಪಿ ಧರಿಸಿ ಗಮನ ಸೆಳೆದಿದ್ದರು.
ನಾಗಾಲ್ಯಾಂಡ್‌ನಲ್ಲಿ ಸ್ಥಳೀಯರು ಬಹಳವಾಗಿ ಮೆಚ್ಚುವ ಹಕ್ಕಿಯಾದ ಹಾರ್ನ್‌ಬಿಲ್ ಅನ್ನು ಈ ಸಾಂಪ್ರದಾಯಿಕ ಬುಡಕಟ್ಟು ಜನಾಂಗ ತಲೆಯ ಮೇಲೆ ಸಾಂಕೇತಿಕವಾಗಿ ಬಳಸುತ್ತದೆ. ಈ ವಿಶೇಷ ಟೋಪಿಯನ್ನು ಅಧಿಕಾರ, ಸ್ಥಾನಮಾನದ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಮಿನಿ ನಾದಮ್ ಕ್ರೀಡಾ ಉತ್ಸವದಲ್ಲಿ ಮಂಗೋಲಿಯಾ ಪ್ರಧಾನಿ ಚಿಮೆದ್ ಸೈಖಾನ್‌ಬಿಲೆಗ್ ಕಂದು ಬಣ್ಣದ ಕುದುರೆಯನ್ನು ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಿದ್ದರು. ಈ ವೇಳೆ ಧರಿಸಿದ್ದ ಡ್ರೆಸ್ ಸಹ ಗಮನಾರ್ಹವಾಗಿತ್ತು.
ಗಂಡನ ಎದುರಲ್ಲೇ ಮಹಿಳೆ ಥಳಿಸಿ ವಿವಸ್ತ್ರಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿದ ಇಬ್ಬರು ಅರೆಸ್ಟ್
ಅಸ್ಸಾಂ ರ್ಯಾಲಿಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ಬಿದಿರಿನಿಂದ ಮಾಡಿದ ಸಾಂಪ್ರದಾಯಿಕ ಜಾಪಿ ಟೋಪಿಯಲ್ಲಿ ಕಾಣಿಸಿಕೊಂಡಿದ್ದರು. ಜಾಪಿಯನ್ನು ಸಾಮಾನ್ಯವಾಗಿ ಅಸ್ಸಾಮಿ ರೈತರು ಮತ್ತು ಗೋಪಾಲಕರು ಧರಿಸುತ್ತಾರೆ.
ಸಾಂಪ್ರದಾಯಿಕ ಲಡಾಕಿ ಉಡುಗೆಯಲ್ಲಿ ಪ್ರಧಾನಿ ಮೋದಿ ಒಮ್ಮೆ ಕಾಣಿಸಿಕೊಂಡಿದ್ದರು. ಅದೇ ರೀತಿ ದೆಹಲಿಯಲ್ಲಿ ನಾಗಾಲ್ಯಾಂಡ್ ಜಿಬಿ ಫೆಡರೇಶನ್‌ನ ನಿಯೋಗದ ಸದಸ್ಯರನ್ನು ಸಾಂಪ್ರದಾಯಿಕ ನಾಗಾ ಉಡುಗೆಯಲ್ಲಿ ಪ್ರಧಾನಿ ಮೋದಿ ಸ್ವಾಗತಿಸಿದ್ದರು.
ಬುಡಕಟ್ಟು ಜನಾಂಗದ ಉಡುಗೆಯಲ್ಲಿ ಕಾಣಿಸಿದ್ದ ಮೋದಿ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಬುಡಕಟ್ಟು ಉತ್ಸವ ಉದ್ಘಾಟನೆ ಮಾಡಿದ್ದರು.
ಗುಜರಾತ್‌ನ ದಾಹೋದ್‌ನ ಬುಡಕಟ್ಟು ಸಮುದಾಯಗಳ ಸಾಂಪ್ರದಾಯಿಕ ಉಡುಗೆಯಲ್ಲಿ ಪ್ರಧಾನಿ ಮೋದಿ ಧರಿಸಿದ್ದರು. ಇದೇ ವೇಳೆ ಬಿಲ್ಲು ಬಾಣ ಪ್ರಯೋಗಿಸಿದ್ದರು.
ಗಣರಾಜ್ಯೋತ್ಸವ ಪರೇಡ್ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡದ ಸಾಂಪ್ರದಾಯಿಕ ಕ್ಯಾಪ್ ಧರಿಸಿ ಕಾಣಿಸಿಕೊಂಡಿದ್ದರು.