alex Certify ಉದ್ಯೋಗಾಕಾಂಕ್ಷಿಗಳಿಗೆ ಗುಡ್​ ನ್ಯೂಸ್​: 10ಕ್ಕೂ ಹೆಚ್ಚು ಸರ್ಕಾರಿ ಇಲಾಖೆಗಳಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ – ಇಲ್ಲಿದೆ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಾಕಾಂಕ್ಷಿಗಳಿಗೆ ಗುಡ್​ ನ್ಯೂಸ್​: 10ಕ್ಕೂ ಹೆಚ್ಚು ಸರ್ಕಾರಿ ಇಲಾಖೆಗಳಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ – ಇಲ್ಲಿದೆ ವಿವರ

ಸರ್ಕಾರಿ ಹುದ್ದೆಯನ್ನ ಹೊಂದಬೇಕು ಅನ್ನೋ ಕನಸು ಯಾರಿಗೆ ಇರೋದಿಲ್ಲ ಹೇಳಿ..? ನೀವು ಕೂಡ ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಬೇಕು ಎಂದುಕೊಂಡಿದ್ದಲ್ಲಿ ಇದು ಸೂಕ್ತವಾದ ಸಮಯವಾಗಿದೆ.

ಪ್ರಸ್ತುತ ಬ್ಯಾಂಕಿಂಗ್​, ಭಾರತೀಯ ಸೇನೆ, ಪೊಲೀಸ್​ ಹುದ್ದೆ ಸೇರಿದಂತೆ ಸಾಕಷ್ಟು ಸರ್ಕಾರಿ ಕೆಲಸಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತ ವಿವರ ಇಲ್ಲಿದೆ ನೋಡಿ :

ಬಿಐಎಸ್​ನಲ್ಲಿ ವಿಜ್ಞಾನಿಗಳ ಹುದ್ದೆ :
ಬ್ಯೂರೋ ಆಫ್​ ಇಂಡಿಯನ್​ ಸ್ಟಾಂಡರ್ಡ್ಸ್​ , ನ್ಯಾಷನಲ್​ ಸ್ಟಾಂಡರ್ಡ್ಸ್​ ಬಾಡಿ ಆಫ್​ ಇಂಡಿಯಾ ಇಂಜಿನಿಯರಿಂಗ್​ ಪದವೀಧರರಿಗೆ ಸೈಂಟಿಸ್ಟ್​ ಬಿ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.

ಖಾಲಿ ಇರುವ 28 ಹುದ್ದೆಗಳಿಗೆ ಭರ್ತಿ ಪ್ರಕ್ರಿಯೆ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಜೂನ್​ 25ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಬಿಐಎಸ್​ ಸೈಂಟಿಸ್ಟ್ ಬಿ ಹುದ್ದೆಗಾಗಿ ಅಧಿಕೃತ ವೆಬ್​ಸೈಟ್​​​ನಲ್ಲಿ ಆನ್​ಲೈನ್​ ಅರ್ಜಿ ಸಲ್ಲಿಸಬೇಕು.

ಹೆಚ್​​ಎಸ್​ಎಸ್​ಸಿಯಲ್ಲಿ ಕಾನ್​ಸ್ಟೇಬಲ್​ ಹುದ್ದೆ :
ಹರಿಯಾಣದಲ್ಲಿ ಪೊಲೀಸ್​ ಇಲಾಖೆಯ ಕಮಾಂಡೋ ವಿಭಾಗದಲ್ಲಿ ( ಗ್ರೂಪ್​ ಸಿ) ಪುರುಷ ಅಭ್ಯರ್ಥಿಗಳಿಗಾಗಿ ಕಾನ್​ಸ್ಟೇಬಲ್​ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 520 ಹುದ್ದೆಗಳು ಖಾಲಿ ಇದ್ದು ಜೂನ್​​ 14ರ ಒಳಗಾಗಿ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 12ನೇ ತರಗತಿ ಉತ್ತೀರ್ಣರಾದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಯುಪಿಎಸ್​ಸಿ ಎನ್​ಡಿಎ II :
ಕೇಂದ್ರ ಸಾರ್ವಜನಿಕ ಸೇವಾ ಆಯೋಗವು ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಹಾಗೂ ನೇವಲ್​ ಅಕಾಡಮಿ ಪರೀಕ್ಷೆಗೆ ಅರ್ಜಿ ಆಹ್ವಾನಿಸಿದೆ.

ಆಸಕ್ತ ಅಭ್ಯರ್ಥಿಗಳು ಜೂನ್​ 29ರವರೆಗೂ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಸೆಪ್ಟೆಂಬರ್​ 5ನೇ ತಾರೀಖಿನಂದು ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಯಲಿದೆ.
ಐಬಿಪಿಎಸ್​ ಆರ್​ಆರ್​ಬಿ ಪಿಒ, ಗುಮಾಸ್ತ ಹುದ್ದೆ

ಐಬಿಪಿಎಸ್​ I, II ಮತ್ತು II ಸ್ಕೇಲ್​​ನ ಹುದ್ದೆಗಳು : ಹಾಗೂ ಗ್ರಾಮೀಣ ಬ್ಯಾಂಕುಗಳಲ್ಲಿ ಸಹಾಯಕ ಹುದ್ದೆ ಅರ್ಜಿ ಆಹ್ವಾನಿಸಿದೆ. ಜೂನ್​ 8ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು ಜೂನ್​ 28ರವರೆಗೂ ಆಸಕ್ತರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಪೂರ್ವ ತರಬೇತಿ ಪರೀಕ್ಷೆಯು ಜುಲೈ 19ರಿಂದ 25ರವರೆಗೆ ನಡೆಯಲಿದೆ.

ಡಿಆರ್​ಡಿಓ ಅಪ್ರೆಂಟಿಸ್​ ನೇಮಕಾತಿ :
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಜೋಧಪುರ ಕಚೇರಿಯಲ್ಲಿ ಅಪ್ರೆಂಟಿಸ್​ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.

47 ಹುದ್ದೆಗಳಿಗೆ ಭರ್ತಿ ಕಾರ್ಯ ನಡೆಯಲಿದ್ದು ಆಸಕ್ತರಿಗೆ ಜೂನ್​ 20ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಬಿಸಿಇಸಿಇಬಿ ನೇಮಕಾತಿ :

ಬಿಹಾರ ಸ್ಪರ್ಧಾತ್ಮಕ ಪರೀಕ್ಷಾ ಮಂಡಳಿಯು ರಾಜ್ಯದ ವಿವಿಧ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿ ಉಪನ್ಯಾಸಕರಿಗೆ ಅರ್ಜಿ ಆಹ್ವಾನಿಸಿದೆ.

ಈ ನೇಮಕಾತಿ ಪ್ರಕ್ರಿಯೆಯು ಒಟ್ಟು 1797 ಹುದ್ದೆಗಳಿಗೆ ನಡೆಯಲಿದೆ. ಆನ್​ಲೈನ್​ ಅರ್ಜಿಯನ್ನ ಜೂನ್​ 20ರ ಒಳಗೆ ಸಲ್ಲಿಕೆ ಮಾಡಬೇಕಿದೆ.

UPSSSC PET ನೇಮಕಾತಿ
ಉತ್ತರ ಪ್ರದೇಶ ಅಧೀನ ಸೇವಾ ಆಯ್ಕೆ ಆಯೋಗವು ಗ್ರೂಪ್​ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇದ್ದಕ್ಕಾಗಿ ಪ್ರಾಥಮಿಕ ಅರ್ಹತಾ ಪರೀಕ್ಷೆಗೆ ಆನ್​ಲೈನ್​ ನೋಂದಣಿ ಪ್ರಕ್ರಿಯೆ ಶುರುವಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಜೂನ್​ 21 ರೊಳಗಾಗಿ ಅರ್ಜಿ ಸಲ್ಲಿಸಬೇಕಿದೆ.

ಭಾರತೀಯ ಸೇನೆಯ ಎಸ್‌ಎಸ್‌ಸಿ-ಟೆಕ್ ನೇಮಕಾತಿ
ಭಾರತೀಯ ಸೇನೆಯಲ್ಲಿ ಎಸ್​ಎಸ್​ಸಿಗಾಗಿ ಅವಿವಾಹಿತ ಪುರುಷ ಹಾಗೂ ಮಹಿಳಾ ಇಂಜಿನಿಯರಿಂಗ್​ ಪದವೀಧರರಿಗೆ ಅರ್ಜಿ ಆಹ್ವಾನಿಸಿದೆ.

ಅರ್ಹ ಅಭ್ಯರ್ಥಿಗಳು ಜೂನ್​ 23ರ ಒಳಗಾಗಿ ಆನ್​ಲೈನ್​ ಪೋರ್ಟಲ್​ನಲ್ಲಿ ಅರ್ಜಿ ಸಲ್ಲಿಸಬೇಕಿದೆ. ಪುರುಷರಿಗಾಗಿ 175 ಹುದ್ದೆ ಹಾಗೂ ಮಹಿಳೆಯರಿಗೆ 14 ಹುದ್ದೆಗಳು ಖಾಲಿ ಇವೆ.

ರೈಲ್ವೆ ಇಲಾಖೆಯಲ್ಲಿ ನೇಮಕಾತಿ :
ರೈಲ್ವೆ ರಿಕ್ರೂಟ್​ಮೆಂಟ್​ ಸೆಲ್​, ವೆಸ್ಟರ್ನ್​ ರೈಲ್ವೆಯು 3591 ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್​ನಲ್ಲಿ ಜೂನ್​ 24ರ ಒಳಗಾಗಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ನೇರ ನೇಮಕಾತಿ ಮೂಲಕ ಹುದ್ದೆಗಳ ಭರ್ತಿಕಾರ್ಯ ನಡೆಯೋದ್ರಿಂದ ಯಾವುದೇ ಪರೀಕ್ಷೆಗಳು ಇರೋದಿಲ್ಲ.
ಹೆಚ್​ಪಿಎಸ್​ಸಿ ಸಹಾಯಕ ಇಂಜಿನಿಯರ್​ ಹುದ್ದೆ
ಹಿಮಾಚಲ ಪ್ರದೇಶ ಸಾರ್ವಜನಿಕ ಸೇವಾ ಆಯೋಗ ಗುತ್ತಿಗೆ ಆಧಾರದಲ್ಲಿ ಇ -2 ಮಟ್ಟದ ಸಹಾಯಕ ಇಂಜಿನಿಯರ್​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳಿಗೆ ಜೂನ್​ 25ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

UPRVUNL JE ನೇಮಕಾತಿ
ಉತ್ತರ ಪ್ರದೇಶ ರಾಜ್ಯ ವಿದ್ಯುತ್​ ಉತ್ಪಾದನಾ ನಿಗಮ ಲಿಮಿಟೆಡ್​​ ಕಿರಿಯ ಇಂಜಿನಿಯರ್​​ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜುಲೈ 2ರ ಒಳಗಾಗಿ ಅಧಿಕೃತ ವೆಬ್​ಸೈಟ್​ನಲ್ಲಿ ಅರ್ಜಿ ಸಲ್ಲಿಸಬೇಕು. ಒಟ್ಟು 196 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...