alex Certify 58 ವರ್ಷಗಳ ನಂತರ ಸ್ವದೇಶಕ್ಕೆ ಮರಳಿದ ಭಾರತದಲ್ಲಿ ನಿಧನರಾದ ಅಮೆರಿಕದ ಸೇನಾಧಿಕಾರಿಯ ಪಾರ್ಥಿವ ಶರೀರ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

58 ವರ್ಷಗಳ ನಂತರ ಸ್ವದೇಶಕ್ಕೆ ಮರಳಿದ ಭಾರತದಲ್ಲಿ ನಿಧನರಾದ ಅಮೆರಿಕದ ಸೇನಾಧಿಕಾರಿಯ ಪಾರ್ಥಿವ ಶರೀರ…..!

ಸುದೀರ್ಘ 58 ವರ್ಷಗಳ ನಂತರ, ಮೇಜರ್ ಜನರಲ್ ಹ್ಯಾರಿ ಕ್ಲೀನ್‌ಬೆಕ್ ಪಿಕೆಟ್ ಅವರ ಕುಟುಂಬ 1965 ರಲ್ಲಿ ಭಾರತದಲ್ಲಿ ನಿಧನರಾದ ಅಮೆರಿಕದ ಸೇನಾಧಿಕಾರಿಯ ಪಾರ್ಥಿವ ಶರೀರವನ್ನು ಕಳೆದವಾರ ಸ್ವೀಕರಿಸಿದರು. ಕಳೇಬರವನ್ನು ಅಮೆರಿಕದ ಆರ್ಲಿಂಗ್ಟನ್ ರಾಷ್ಟ್ರೀಯ ಸ್ಮಶಾನದಲ್ಲಿ ಮರು ಸಮಾಧಿ ಮಾಡಲಾಗುವುದು.

ವಿಶ್ವ ಮಹಾಯುದ್ಧ 1 ಮತ್ತು ಎರಡರಲ್ಲೂ ಹೋರಾಡಿದ ಮೇಜರ್ ಜನರಲ್ ಪಿಕೆಟ್, 1965 ರಲ್ಲಿ ವಿಶ್ವ ಪ್ರವಾಸದ ಭಾಗವಾಗಿ ಭಾರತಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿದ್ದಾಗ ಹೃದಯ ಸ್ತಂಭನದಿಂದ ನಿಧನರಾದರು. ಅಮೆರಿಕದ ಅಧಿಕಾರಿ ಪಿಕೆಟ್ ರನ್ನು ಸ್ಥಳೀಯ ಸ್ಮಶಾನದಲ್ಲಿ ಅಂತಿಮ ವಿಧಿ ವಿಧಾನಗಳೊಂದಿಗೆ ಸಮಾಧಿ ಮಾಡಲಾಯಿತು.

ಪಿಕೆಟ್ ಅವರ ಕುಟುಂಬ ಮತ್ತು ಅಮೆರಿಕ ಸರ್ಕಾರವು ಅವರ ಅವಶೇಷಗಳನ್ನು ತವರಿಗೆ ಹಿಂದಿರುಗಿಸಲು ಹಲವಾರು ಪ್ರಯತ್ನಗಳನ್ನು ಮಾಡಿದರು. ಭಾರತೀಯ ಆಡಳಿತ ಮತ್ತು ಯುಎಸ್ ಅಧಿಕಾರಿಗಳ ನಡುವಿನ ನಿರಂತರ ಸಮನ್ವಯತೆಯ ಹೊರತಾಗಿಯೂ ಪಾರ್ಥೀವ ಶರೀರವು ಅಮೆರಿಕ ತಲುಪಲು ಬರೋಬ್ಬರಿ ಆರು ದಶಕಗಳನ್ನೇ ತೆಗೆದುಕೊಂಡಿತು.

ಇದೀಗ ಭಾರತದ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಭಾರತ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ್ರು. ಮೇಜರ್ ಜನರಲ್ ಪಿಕೆಟ್ ಅವರನ್ನು ಅವರ ಪ್ರೀತಿಪಾತ್ರರೊಂದಿಗೆ ಮತ್ತೆ ಸೇರಿಸಿದ್ದಕ್ಕಾಗಿ, ಅಮೆರಿಕನ್ನರು ಮತ್ತು ಭಾರತೀಯರನ್ನು ಒಟ್ಟಿಗೆ ಬಂಧಿಸುವ ಸ್ನೇಹದ ಬಂಧಗಳನ್ನು ಬಲಪಡಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಅವರು ಹೇಳಿದರು.

ಕೋಲ್ಕತ್ತಾದಲ್ಲಿರುವ ಅಮೆರಿಕ ಕಾನ್ಸುಲೇಟ್ ಜನರಲ್ ಮೆಲಿಂಡಾ ಪಾವೆಕ್, ಮೇಜರ್ ಜನರಲ್ ಪಿಕೆಟ್ ಅವರನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಅವರ ಕುಟುಂಬದೊಂದಿಗೆ ಪುನಃ ಸೇರಿಸಲು ಸಾಧ್ಯವಾಗಿದೆ. ಅವರು ವಿಶ್ವ ಸಮರ 1 ಮತ್ತು 2 ರಲ್ಲೂ ಹೋರಾಡಿದ್ದರು. ಹೀಗಾಗಿ ನಾವು ಕೃತಜ್ಞರಾಗಿರುತ್ತೇವೆ. ಭಾರತ ಸರ್ಕಾರ ಮತ್ತು ಪಶ್ಚಿಮ ಬಂಗಾಳ ರಾಜ್ಯವು ಅವರ ಮರಳುವಿಕೆಯನ್ನು ಸಾಧ್ಯವಾಗಿಸಿತು ಅಂತಾ ತಿಳಿಸಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...